ಮನೋರಂಜನೆ

ವಿಶ್ವಕಪ್ ಟಿ-20 ಯಿಂದ ಸಿಮೊನ್ಸ್ ಹೊರಕ್ಕೆ

Pinterest LinkedIn Tumblr

simoದೆಹಲಿ: ವೆಸ್ಟ್ ಇಂಡೀಸ್ ತಂಡದ ಆಲ್‌ರೌಂಡರ್ ಲೆಂಡಲ್ ಸಿಮೊನ್ಸ್ ಅವರು ಟಿ-20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.

ಬೆನ್ನು ನೋವಿನ ಸಮಸ್ಯೆೆಗೆ ಒಳಗಾಗಿರುವ ಅವರು ಭಾರತದಲ್ಲಿ ನಡೆಯುವ ಟಿ-20 ವಿಶ್ವಕಪ್‌ನಲ್ಲಿ ಆಡದಿರುವುದು ಖಚಿತವಾಗಿದೆ. ಸಿಮೊನ್‌ಸ್‌ ಜಾಗಕ್ಕೆೆ ಬೇರೊಬ್ಬ ಆಟಗಾರರನ್ನು ಆಯ್ಕೆೆಮಾಡುವುದಾಗಿ ವೆಸ್‌ಟ್‌ ಇಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಕೆರೆಬಿಯನ್ ತಂಡದಲ್ಲಿ ಈಗಾಗಲೇ ಹಲವು ಆಟಗಾರರು ಹೊರಗುಳಿದಿದ್ದಾರೆ. ಡೆರೆನ್ ಬ್ರಾಾವೊ, ಸುನೀಲ್ ನರೈನ್ ಮತ್ತು ಕೀರನ್ ಪೊಲಾರ್ಡ್ ಅವರು ಗಾಯದ ಸಮಸ್ಯೆೆ ಕಾರಣದಿಂದ ವಿಶ್ವ ಟಿ-20ಯಿಂದ ಹಿಂದೆ ಸರಿದಿದ್ದಾರೆ. ಪ್ರಸ್ತುತ ಲಿಂಡಲ್ ಸಿಮೊನ್‌ಸ್‌ ಅವರು ತಂಡದಿಂದ ಹೊರಗುಳಿದಿರುವುದು ಕೆರೆಬಿಯನ್ ಪಾಳಯಕ್ಕೆೆ ದೊಡ್ಡ ನಷ್ಟ. ಈ ಹಿಂದೆ ವೇತನ ಕಾರಣದಿಂದ ವೆಸ್ಟ್ ಇಂಡೀಸ್ ತಂಡದ ಆಟಗಾರರು ವಿಶ್ವ ಟಿ-20 ಟೂರ್ನಿಯನ್ನು ಬಹಿಷ್ಕಾರ ಮಾಡಿದ್ದರು. ಆದರೆ ನಂತರದಲ್ಲಿ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರ ನಡುವಿನ ಮಾತುಕತೆಯಿಂದ ಟೂರ್ನಿಯಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದರು.

Write A Comment