ರಾಷ್ಟ್ರೀಯ

‘ಬಾಲ್ಯವಿವಾಹ ಅನೂರ್ಜಿತವಾಗಲ್ಲ’: ಮದ್ರಾಸ್ ಹೈಕೋರ್ಟ್

Pinterest LinkedIn Tumblr

madrashಮಧುರೈ: ಬಾಲ್ಯವಿವಾಹ ತನ್ನಿಂದ ತಾನೆ ಮುರಿದು ಬೀಳಲು ಅವಕಾಶವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕಳೆದ ಏಪ್ರಿಲ್‌ನಲ್ಲಿ ಮಹಿಳೆಯೊಬ್ಬಳು ಸಲ್ಲಿಸಿದ್ದ ವಿವಾಹವಿಚ್ಚೇಧನ ಅರ್ಜಿಯನ್ನು ಸ್ವೀಕರಿಸಲು ತಿರುನನ್ವೇಲಿ ಅಧೀನ ನ್ಯಾಯಾಲಯ ಸಮ್ಮತಿಸಿರಲಿಲ್ಲ. ಹೀಗಾಗಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದಳು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಮಣಿ ಕುಮಾರ್ ಹಾಗೂ ನ್ಯಾಯಮೂರ್ತಿ ಸಿ.ಟಿ.ಸೆಲ್ವಂ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಒಂದು ವೇಳೆ ಬಾಲ್ಯ ವಿವಾಹವಾದ ಬಾಲಕ ಹಾಗೂ ಬಾಲಕಿ ವಿಚ್ಛೇದನ ಬಯಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರೆ ಅದನ್ನು ಅನೂರ್ಜಿತಗೊಳಿಸುವ ಅವಕಾಶವಿಲ್ಲ. ಬದಲಾಗಿ ಎಲ್ಲ ವಿಚ್ಚೇಧನ ಪ್ರಕರಣಗಳಂತೆ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣದ ವಾದ ವಿವಾದ ನಡೆಯಲೇ ಬೇಕು. ಅದಕ್ಕೆೆ ಎರಡು ವರ್ಷಗಳ ವರೆಗೆ ಕಾಲಾವಕಾಶ ಇದೆ ಎಂದು ಅಭಿಪ್ರಾಯಪಟ್ಟಿದೆ.

ಅರ್ಜಿ ಸಲ್ಲಿಸಿರುವ ಮಹಿಳೆಗೆ 1995ರಲ್ಲಿ ವಿವಾಹವಾಗಿದ್ದು, ಈ ಸಮಯದಲ್ಲಿ ಆಕೆ ಅಪ್ರಾಪ್ತೆಯಾಗಿದ್ದಳು. ಹೀಗಾಗಿ ಈಗ ಮಹಿಳೆ ಬಾಲ್ಯವಿವಾಹದ ಪ್ರಕರಣದ ಅಡಿಯಲ್ಲಿ ವಿಚ್ಛೇದನ ಕೋರಿ ಕೇಸ್ ದಾಖಲು ಮಾಡಿದ್ದಳು. 1955ರ ಹಿಂದೂ ವಿವಾಹ ಕಾಯ್ದೆೆ ಪ್ರಕಾರ ಮದುವೆಗೆ ಹೆಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ವಯಸ್ಸಾಗಿರಬೇಕು. ಈ ಕಾನೂನು ಉಲ್ಲಂಘನೆ ಮಾಡಿದಲ್ಲಿ ಅಂತವರ ವಿರುದ್ಧ ಸೆಕ್ಷನ್ 11 ಹಾಗೂ 12 ಅಡಿ ಕೇಸ್ ದಾಖಲಿಸಬಹುದು. ಹಾಗು ಸೆಕ್ಷನ್ 13ರ ಅಡಿ ವಿಚ್ಛೇದನ ಪಡೆಯಲು ಅವಕಾಶ ಇದೆ ಎಂದು ಹೇಳಿದೆ.

Write A Comment