ಮೈಸೂರು: ಪತ್ನಿಯ ಅನೈತಿಕ ಸಂಬಂಧದಿಂದ ನೊಂದ ಪತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಅಸ್ವಾಳ್ ಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯನ್ನು ಗ್ರಾಮದ ಸಣ್ಣಸ್ವಾಮಿ (42) ಎನ್ನಲಾಗಿದೆ.
ಈತನ ಪತ್ನಿ ಅದೇ ಗ್ರಾಮದ ವ್ಯಕ್ತಿಯೊಬ್ಬನ ಜೊತೆ ಅನೇಕ ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ೀ ವಿಚಾರ ಗ್ರಾಮದ ಮುಖಂಡರ ಬಳಿ ಹೋಗಿದ್ದು,ಈ ವೇಳೆ ಪತ್ನಿ ಗಂಡನಿಂದ ದೂರವಾಗಿ ತನಗೆ ಜೀವನಾಂಶ ಬೇಕು ಎಂದು ಮೊಕದ್ದಮೆ ಹೂಡಿದ್ದಳು. ಇದರಿಂದ ತೀವ್ರ ಮನನೊಂದ ಸಣ್ಣಸ್ವಾಮಿ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.