ಮನೋರಂಜನೆ

‘ಹೌದು ನಾನು ಮದುವೆಯಾಗಿದ್ದೆನೆ’ : ಪ್ರೀತಿ ಜಿಂಟಾ ಸ್ಪಷ್ಟನೆ

Pinterest LinkedIn Tumblr

priಮುಂಬೈ ಮಾ.06 : ಕೆಲವು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಪ್ರೀತಿ ಜಿಂಟಾ ಮದುವೆಯ ವಿಷಯ ಹರಿದಾಡುತ್ತಿದ್ದ ಅನುಮಾನಗಳಿಗೆ ತೆರೆ ಬಿದ್ದಿದೆ. ಸ್ವತಃ ಪ್ರೀತಿಯೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾಳೆ. ಅಮೆರಿಕದ ಜೀನ್ ಗೂಡೆನಾಗ್ ಅವರನ್ನು ಮದುವೆಯಾಗುವ ಮೂಲಕ ‘ಮಿಸ್’ ಹಣೆಪಟ್ಟಿಗೆ ತಿಲಾಂಜಲಿ ನೀಡಿದ್ದೇನೆ ಎಂದು ಬಾಲಿವುಡ್ ನಟಿ ಪ್ರೀತಿ ಜಿಂಟಾ ಭಾನುವಾರ ದೃಢಪಡಿಸಿದ್ದಾರೆ.

ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಣೆ ನೀಡುವ ಮೂಲಕ ಜಿಂಟಾ ತಾವು ಮದುವೆಯಾಗಿರುವುದನ್ನು ಸ್ಪಷ್ಟ ಪಡಿಸಿದ್ದಾರೆ. ಲಾಸ್ ಏಂಜಲೀಸ್​ನಲ್ಲಿ ಕೆಲ ದಿನಗಳ ಹಿಂದೆ ರಹಸ್ಯವಾಗಿ ಅವರ ಮದುವೆ ನಡೆದ ಬಗ್ಗೆ ವರದಿಗಳು ಬಂದಿದ್ದವು.

‘ನಾನು ಈವರೆಗೂ ಮಿಸ್ ಹಣೆಪಟ್ಟಿಯನ್ನು ಗಂಭೀರವಾಗಿಯೇ ಇಟ್ಟುಕೊಂಡಿದ್ದೆ. ಗೂಡೆನಾಗ್ ಅವರನ್ನು ಭೇಟಿಯಾದ ಬಳಿಕ ನಾನು ‘ಮಿಸ್’ ಹಣೆಪಟ್ಟಿ ಬಿಟ್ಟಿದ್ದೇನೆ. ನಾನೀಗ ಮದುವೆಯಾದವರ ಕ್ಲಬ್ ಸೇರಿದ್ದೇನೆ’ ಎಂದು ಜಿಂಟಾ ಬರೆದಿದ್ದಾರೆ.

Write A Comment