ಮನೋರಂಜನೆ

ತಾರಾಗೆ ಜನ್ಮದಿನ ಸಂಭ್ರಮ

Pinterest LinkedIn Tumblr

taraಬೆಂಗಳೂರು, ಮಾ. ೪ – ವಿಧಾನ ಪರಿಷತ್ ಸದಸ್ಯೆ ಹಾಗೂ ಚಿತ್ರನಟಿ ತಾರಾ ಅನುರಾಧಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಿಧಾನ ಪರಿಷತ್‌ನಲ್ಲಿಂದು ಹಲವು ಸದಸ್ಯರು ತಾರಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿ ಇನ್ನೂ ನೂಱ್ಕಾಲ ಬಾಳಲಿ ಎಂದರು.

ಪರಿಷತ್‌ನ ಮೊಗಸಾಲೆಯಲ್ಲಿ ಮಾತನಾಡಿದ ತಾರಾ, ವಿಧಾನ ಪರಿಷತ್ ಸದಸ್ಯೆಯಾದ ಮೇಲೆ ಅಧಿವೇಶನ ನಡೆಯುವಾಗ ಹುಟ್ಟುಹಬ್ಬವನ್ನು ಇದೇ ಮೊದಲ ಬಾರಿ ಆಚರಿಸಿಕೊಳ್ಳುತ್ತಿದ್ದೇನೆ, ಇದು ಖುಷಿಯ ಸಂಗತಿ. ಈ ಮುಂಚೆ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೆ, ಈಗ ಸದನದ ಸದಸ್ಯರ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ ಎಂದರು.

Write A Comment