ಮನೋರಂಜನೆ

ನವೀನ್‌ ಜೊತೆ ಭಾವನಾ ಸಪ್ತಪದಿ

Pinterest LinkedIn Tumblr

bavanaಬಹುಭಾಷಾ ನಟಿ ಭಾವನಾ ಕನ್ನಡದ ಹುಡುಗನ ಜೊತೆ ಹಸೆಮಣೆ ಏರಲಿದ್ದಾರೆ. ಈ ಹಿಂದೆ ಭಾವನಾ ಮದುವೆ ಆಗ್ತಿದಾರೆ ಅನ್ನೋ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಹರಿದಾಡಿತ್ತಾದ್ದರೂ, ಭಾವನಾ ಮನಗೆದ್ದ ನಾಯಕ ಯಾರು ಅನ್ನೋದು ಗೊತ್ತಿರಲಿಲ್ಲ. ಆದರೆ ಈಗ ಭಾವನಾ, ಚಿತ್ರ ನಿರ್ಮಾಪಕ ಮತ್ತು ‘ನಾಯಕ’ ಚಿತ್ರದ ಹೀರೋ ನವೀನ್‌ ಸಪ್ತಪದಿ ತುಳಿಯೋದು ಪಕ್ಕ ಅಗಿದೆ.

ಕೇರಳ ಮೂಲದವರಾದ ಭಾವನಾ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿರೋದು ಪವರ್‌ ಸ್ಟಾರ್‌ ಪುನೀತ್ ಅಭಿನಯದ ಜಾಕಿ  ಚಿತ್ರದಿಂದ. ನಂತರ ಬಂದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ  ‘ರೋಮಿಯೊ’, ಕಿಚ್ಚ ಸುದೀಪ್‌ನ ಅಭಿನಯದ ‘ವಿಷ್ಣುವರ್ಧನ್‌’ ಹಾಗೂ ‘ಬಚ್ಚನ್‌’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದರು ಮಾತ್ರವಲ್ಲದೇ, ಇವರು ಕನ್ನಡದಲ್ಲಿ ಅಭಿನಯಿಸಿರೋ ಚಿತ್ರಗಳು ನಿರ್ಮಾಪಕ ಮತ್ತು ನಾಯಕರಿಗೆ ಸಾಕಷ್ಟು ಹೆಸರು ತಂದು ಕೊಟ್ಟಿತ್ತು.

ಸದ್ಯ ಮದುವೆ ಬ್ಯುಸಿಯಲ್ಲಿರುವ ಭಾವನಾ ಜೂನ್ ನಲ್ಲಿ ತಮ್ಮ ರೋಮಿಯೊ ನವೀನ್‌ ಜೊತೆ ಹಸೆಮಣೆ ಏರಲಿದ್ದಾರೆ.

Write A Comment