ರಾಷ್ಟ್ರೀಯ

ರಾಹುಲ್ ವಿರುದ್ಧ ಆರ್ ಎಸ್ಎಸ್ ಮಾನನಷ್ಟ ಮೊಕದ್ದಮೆ

Pinterest LinkedIn Tumblr

rahul-gandhi4ಗುವಾಹಟಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಗುವಾಹಟಿಯಲ್ಲಿ ರೈತ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸ೦ದರ್ದಭಲ್ಲಿ ಪುರಾತನ ವೈಷ್ಣವ ದೇಗುಲಕ್ಕೆ ರಾಹುಲ್ ಭೇಟಿ ನೀಡಿದ್ದರು. ಆ ಸಂಧರ್ಭದಲ್ಲಿ ದೇಗುಲದ ಒಳ ಪ್ರವೇಶಿಸದ೦ತೆ ಆರ್‍ಎಸ್‍ಎಸ್ ಕಾರ್ಯಕರ್ತರು ತಡೆದಿದ್ದರು ಎಂದು ರಾಹುಲ್ ಆರೋಪಿಸಿದ್ದರು.

ಆದರೆ ಇಂತಹ ಯಾವ ಘಟನೆಗಳು ನಡೆದಿಲ್ಲ ದೇಗುಲದ ಅರ್ಚಕ ಹಾಗೂ ಆಡಳಿತ ಮ೦ಡಳಿ ಹೇಳಿತ್ತು. ಸುಳ್ಳು ಆರೋಪ ಹೊರಿಸಿ ಸ೦ಘಟನೆಯ ತೇಜೋವಧೆಗೆ ರಾಹುಲ್ ಯತ್ನಿಸಿದ್ದಾರೆ ಎಂದು ಸಂಘ ದೂರು ದಾಖಲಿಸಿದೆ.

Write A Comment