ಅಂತರಾಷ್ಟ್ರೀಯ

ಅಮೆರಿಕದಲ್ಲಿ ಗುರುದ್ವಾರವೊಂದನ್ನು ಧ್ವಂಸಮಾಡಿದ್ದ ಬೆತ್ತಲೆ ವ್ಯಕ್ತಿ ಅರೆಸ್ಟ್

Pinterest LinkedIn Tumblr

ameವಾಷಿಂಗ್ಟನ್, ಮಾ.4- ಅಮೆರಿಕದಲ್ಲಿ ಜನಾಂಗೀಯ ದ್ವೇಷದ ಅಪರಾಧಗಳು ಹೆಚ್ಚುತ್ತಿದ್ದು, ಇಲ್ಲಿನ ಸಿಖ್ಖರ ಪೂಜಾ ಮಂದಿರ ಗುರುದ್ವಾರ ವೊಂದನ್ನು ಬೆತ್ತಲೆ ವ್ಯಕ್ತಿಯೊಬ್ಬ ಧ್ವಂಸಮಾಡಿರುವ ಘಟನೆ ನಡೆದಿದೆ. ಸ್ಪೊರೇನ್‌ನ ಗುರುದ್ವಾರಕ್ಕೆ ನುಗ್ಗಿದ 44 ವರ್ಷದ ಜೆಫ್ರಿಸಿಪಿಟ್‌ಮನ್ ಎಂಬ ವ್ಯಕ್ತಿ. ಗುರುದ್ವಾರದ ಒಳಗಿನ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿದ್ದಾನೆ.

ಸಂಪೂರ್ಣ ಬೆತ್ತಲಾಗಿದ್ದ ವ್ಯಕ್ತಿ ಮಂದಿರದಲ್ಲಿನ ಪವಿತ್ರ ಖಡ್ಗವನ್ನು ಕೈಗೆ ತೆಗೆದುಕೊಂಡಿದ್ದ. ಅವನನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ಪಿಟ್‌ಮನ್ ಮಂದಿರ ದಲ್ಲಿದ್ದ ಎಲ್ಲಾ ಪೂಜಾ ನೀಯಮ ವಾದ ಪವಿತ್ರ ವಸ್ತುಗಳನ್ನು ಧ್ವಂಸ ಮಾಡಿದ್ದ. ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಣಬೇಕು. ಯಾವುದೇ ಧರ್ಮದವರ ಮನಸಿನ ಭಾವನೆಗಳಿಗೆ ನೋವುಂಟು ಮಾಡುವ ಅಪರಾಧಕ್ಕೆ ಜೈಲು ಶಿಕ್ಷೆ ವಿಧಿಸಲಾಗತ್ತದೆ.

ಈ ರೀತಿ ಜನಾಂಗೀಯ ದ್ವೇಶದ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Write A Comment