ಮನೋರಂಜನೆ

ಕಾಣೆಯಾಗಿದ್ದಾಳೆ ಮೋನಿಕಾ! ನೈಜ ಘಟನೆಗಳೇ ಸಿನಿಮಾ ಆಯ್ತು

Pinterest LinkedIn Tumblr

Monika-is-Missing-_(116)“ಇಂಥದ್ದೊಂದು ಸಾಲು “ಮೊನಿಕಾ ಈಸ್‌ ಮಿಸ್ಸಿಂಗ್‌’ ಚಿತ್ರದ ಪೋಸ್ಟರ್‌ ಮೇಲೆ ಬರೆಯಲಾಗಿತ್ತು. ಅದನ್ನು ಕಂಡೊಡನೆ ಪತ್ರಕರ್ತರು, “ಅದೆಂಥಾ ಡಿಸ್ಟರ್ಬಿಂಗ್‌ ಮೂವೀ ನಿಮ್ದು, ಸ್ವಲ್ಪ ಹೇಳಿ ನೋಡೋಣ’ ಅಂತ ನಿರ್ದೇಶಕ ಕೃಷ್ಣ ಅವರಿಗೆ ಪ್ರಶ್ನೆ ಎಸೆದೇಬಿಟ್ಟರು. ಉತ್ತರ ಕೊಡೋಕೆ ರೆಡಿಯಾದ ಕೃಷ್ಣ, “ತಮ್ಮ ಸಿನಿಮಾಗಳ ಬಗ್ಗೆ ತಮಗೆ ನಂಬಿಕೆ ಇರುತ್ತೆ. ಆ ಕಾರಣಕ್ಕೆ ಕೆಲವನ್ನು ಪೋಸ್ಟರ್‌ ಮೇಲೆ ಬರೆದಿರುತ್ತೇವೆ. ಚಿತ್ರ ಚೆನ್ನಾಗಿದೆ, ನೂರುದಿನ ಗ್ಯಾರಂಟಿ ಅನ್ನೋ ಮಾತು ಹೇಳ್ತಾರಲ್ವಾ. ಅದು ಹೀಗೆ, ನನ್ನ ಮಟ್ಟಿಗೆ ಮಾತ್ರ ಈ ಚಿತ್ರ ನೋಡಿದರೆ ಡಿಸ್ಟರ್ಬ್ ಆಗೋದು ಗ್ಯಾರಂಟಿ. ಯಾಕೆಂದರೆ, ಇಲ್ಲಿ ವಾಟ್ಸಾಪ್‌, ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಆದಂತಹ ಕೆಲ ನೈಜ ಘಟನೆಗಳನ್ನು ಇಟ್ಟುಕೊಂಡೇ ಚಿತ್ರದ ಕಥೆ ಹೆಣೆದಿದ್ದೇನೆ.

ಅದರಲ್ಲೂ, ಇಂದಿನ ಯೂತ್ಸ್ ಸಾಮಾಜಿಕ ಜಾಲಗಳಿಂದಾಗಿ ಹೇಗೆಲ್ಲಾ ಹಾಳಾಗ್ತಾರೆ ಮತ್ತು ಮೋಸ ಹೋಗುತ್ತಾರೆ ಎಂಬುದು ಹೈಲೈಟ್‌ ಆಗಿದೆ. ಇದೊಂಥರಾ ಸೈಕಲಾಜಿಕಲ್‌ ಥ್ರಿಲ್ಲರ್‌ ಎನ್ನಬಹುದು’ ಅಂದರು ಅವರು.

ಮೊನಿಕಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾಯಕಿ ರಾಧಿಕಾಗೆ ಇದು ಮೊದಲ ಚಿತ್ರವಂತೆ. ಅವರಿಲ್ಲಿ ಯಾಕೆ ಮಿಸ್‌ ಆಗ್ತಾರೆ, ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದನ್ನು ತೆರೆಯ ಮೇಲೆ ನೋಡಬೇಕಂತೆ. ಮತ್ತೂಬ್ಬ ಹುಡುಗಿ ಜಿಯಾನ ಇಲ್ಲಿ ಡೀಸೆಂಟ್‌ ಪಾತ್ರವಂತೆ.

ಚಿತ್ರದಲ್ಲಿ ಅಭಯ್‌ ಗೆ ಪ್ರಮುಖ ಪಾತ್ರ. ಅವರಿಗೆ ಇದು ಎರಡನೇ ಸಿನಿಮಾ. ಸಹ ನಿರ್ಮಾಪಕಿ ಶಬೀನಾ, “ಇದೊಂದು ಒಳ್ಳೆಯ ಪ್ರಯೋಗಾತ್ಮಕ ಚಿತ್ರ ಆಗುತ್ತೆ. ಮಹಿಳೆಯರ ಮೇಲಿನ ಶೋಷಣೆ ಹೇಗೆಲ್ಲಾ ಆಗುತ್ತೆ ಅನ್ನುವುದಕ್ಕೆ ಇದು ಕನ್ನಡಿಯಾಗುವುದರ ಜತೆಯಲ್ಲಿ ಹೇಗಿರಬೇಕು ಎಂಬುದನ್ನೂ ತೋರಿಸಿಕೊಡಬಲ್ಲ ಚಿತ್ರ’ ಅಂದರು ಅವರು. ಕ್ಯಾಮೆರಾಮೆನ್‌ ಸಾಯಿ ಡೇವಿಡ್‌, ಗಜರಾಜ ಗೌಡ, ನವರತ್ನ ಪ್ರಸಾದ್‌, ಲಕ್ಷ್ಮಣ್‌, ಮೋಹನ್‌ ಇತರರು ಮೊನಿಕಾ ಬಗ್ಗೆ ಮಾತಾಡಿದರು.

-ಉದಯವಾಣಿ

Write A Comment