ಮುಂಬೈ

‘ಕಾಮಿಡಿ’ ಕಾರ್ಯಕ್ರಮಕ್ಕೆ ಪ್ರಧಾನಿ ಕರೆತರಲು ಕಪಿಲ್ ಸರ್ಕಸ್

Pinterest LinkedIn Tumblr

kapil-webಮುಂಬೈ: ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದ ಕಪಿಲ್ ಶರ್ಮಾ ಅವರು ತಮ್ಮ ಕಾರ್ಯಕ್ರಮಕ್ಕೆ ಬಾಲಿವುಡ್ ಮತ್ತು ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳನ್ನು ಆಹ್ವಾನಿಸಿದ್ದಾರೆ. ಅದರೆ ಈಗ ಅವರು ತಮ್ಮ ಕಾರ್ಯಕ್ರಮಕ್ಕೆ ರಾಜಕಾರಣಿಗಳನ್ನೂ ಆಹ್ವಾನಿಸುವ ಆಶಯ ವ್ಯಕ್ತ ಪಡಿಸಿದ್ದಾರೆ.

ತಮ್ಮ ನೂತನ ’ಕಾಮಿಡಿ ಸರ್ಕಸ್’ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವುದರ ಜತೆಗೆ ಮೋದಿ ಅವರು ಪುಟ್ಟ ಪಟ್ಟಣದಿಂದ ಪ್ರಧಾನಿಯಾಗುವಲ್ಲಿವರೆಗಿನ ಸ್ಪೂರ್ತಿದಾಯಕ ಜೀವನ ಯಾತ್ರೆಯನ್ನು ಬಿಚ್ಚಿಡುವ ಅಭಿಲಾಶೆ ವ್ಯಕ್ತಪಡಿಸಿದ್ದಾರೆ.

ಚಾಯವಾಲಾ ದೇಶದ ಪ್ರಧಾನಿ ಆದ ಕಥೆಯನ್ನು ‘ಇನ್ಸಪಿರೇಶನಲ್’ ಎಂಬ ಟೈಟಲ್ ಅಡಿಯಲ್ಲಿ ಪ್ರಸಾರ ಮಾಡಲು ಕಾರ್ಯಯೋಜನೆ ರೂಪಿಸಿರುವ ಕಪಿಲ್, ಪ್ರಧಾನಿ ಅವರ ಬಳಿ ಈ ಕುರಿತು ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ. ‘ ದಿ ಎಲ್ಲೆನ್ ಡಿಜೆನೆರೆಸ್​ಶೋ’ ಎಂಬ ಅಮೆರಿಕದ ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಅಲ್ಲಿನ ಅಧ್ಯಕ್ಷರಾದ ಬರಾಕ್ ಒಬಾಮ ಕಾಣಿಸಿಕೊಂಡಿದ್ದರು ಎಂದು ಕಪಿಲ್ ಉಲ್ಲೇಖಿಸಿದ್ದಾರೆ.

Write A Comment