ಮನೋರಂಜನೆ

ತುರ್ಬಾನ್ ಹಾಕಿಕೊಳ್ಳಲು ಅಧಿಕಾರಿಗಳ ಅಡ್ಡಿ

Pinterest LinkedIn Tumblr

tuವಾಷಿಂಗ್ಟನ್ : ಭಾರತೀಯ ಮೂಲದ ಅಮೆರಿಕದ ಸಿಖ್ ಯೋಧ ಕ್ಯಾಪ್ಟನ್ ಸಿಮ್ರತ್‌ಪಾಲ್ ಸಿಂಗ್ ಅಮೆರಿಕದ ಮಿಲಿಟರಿ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ. ಸಿಖ್ ಸಂಪ್ರದಾಯದಂತೆ ಗಡ್ಡ ಹಾಗೂ ತಲೆಗೆ ಪೇಟ ಧರಿಸಲು ಅನುಮತಿ ಕೋರಿದ್ದರು. ಇದಕ್ಕಾಗಿ ಸಿಮ್ರತ್‌ಪಾಲ್ ಅವರನ್ನು ಗುರಿಯಾಗಿಸಿಕೊಂಡು ಪದೇ ಪದೇ ಮರು ಪರೀಕ್ಷೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಮೆರಿಕದಲ್ಲಿ ಇದುವರೆಗೂ ಆರು ಸಿಖ್ ಸೈನಿಕರಿಗೆ ಗಡ್ಡ ಹಾಗೂ ಉದ್ದ ಕೂದಲು ಹೊಂದಲು ಅವಕಾಶ ನೀಡಲಾಗಿದ್ದು, ಸಿಮ್ರತ್‌ಪಾಲ್ ಸಹ ಇದಕ್ಕಾಗಿ ಅವಕಾಶ ಕೋರಿದ್ದರು. ಆದರೆ ಇದಕ್ಕೆ ಒಪ್ಪಿಗೆ ಸೂಚಿಸಲು ಅಧಿಕಾರಿಗಳು ತಮ್ಮನ್ನು ಮತ್ತೆ ಮತ್ತೆ ಪರೀಕ್ಷಿಸುತ್ತಿದ್ದಾರೆ ಎಂದು ಸಿಮ್ರತ್ ಪಾಲ್ ಆರೋಪಿಸಿದ್ದಾರೆ.

ಕ್ಯಾಪ್ಟನ್ ಸಿಮ್ರತ್‌ಪಾಲ್ ಸಿಂಗ್ 349ನೇ ಇಂಜಿನಿಯರ್ ಬೆಟಾಲಿಯನ್‌ಗೆ ಸೇರಿದ್ದು, ಇವರು ಅಫ್ಘಾನಿಸ್ತಾನದ ಕಂದಾಹಾರ್‌ನಲ್ಲಿ ಉಗ್ರರು ಅಡಗಿಸಿದ್ದ ಸ್ಫೋಟಕಗಳನ್ನು ತೆರವುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಗೆ ಕಂಚಿನ ಪದಕ ಸಹ ಲಭ್ಯವಾಗಿತ್ತು. ಅಲ್ಲದೆ ಇವರಿಗೆ ಸಿಖ್ ಧರ್ಮದ ರೀತಿ ಉಡುಪುಗಳನ್ನು ಧರಿಸಲು ತಾತ್ಕಾಲಿಕ ಅವಕಾಶ ನೀಡಲಾಗಿತ್ತು.

ಆದರೆ ಕೆಲ ದಿನಗಳ ಹಿಂದೆ ಸಹಾಯಕ ಸೈನ್ಯದ ಕಾರ್ಯದರ್ಶಿ ದೇಬ್ರಾ ವಾಡಾ ಆದೇಶ ಹೊರಡಿಸಿದ್ದು, ಸಿಖ್ ಧರ್ಮದ ರೀತಿ ಗಡ್ಡ, ಉದ್ದ ಕೂದಲು ಬಿಡುವುದಕ್ಕೆ ಮತ್ತೆ ಅನುಮತಿ ಪಡೆಯುವಂತೆ ಸೂಚಿಸಿದ್ದರು. ಅಲ್ಲದೆ ಅವರು ತುರ್ಬಾನ್ ಹಾಕಿಕೊಳ್ಳುವುದರಿಂದ ಹೆಲ್ಮೆಟ್ ಹಾಗೂ ಗ್ಯಾಸ್ ಮಾಸ್ಕ್‌ ಹಾಕಿಕೊಳ್ಳಲು ಕಷ್ಟವಾಗಿದ್ದು, ಅವರ ಸುರಕ್ಷತೆಗಾಗಿ ಈ ರೀತಿ ಹೇಳಿರುವುದಾಗಿ ಹೇಳಿದ್ದಾರೆ.

Write A Comment