ರಾಷ್ಟ್ರೀಯ

ದೇಶದ್ರೋಹದ ಕಾನೂನಿಗೆ ತಿದ್ದುಪಡಿ..?

Pinterest LinkedIn Tumblr

desದೆಹಲಿ: ಜೆಎನ್‌ಯು ವಿದ್ಯಾರ್ಥಿಗಳನ್ನು ಬಂಧಿಸಿದ ಹಿನ್ನಲೆಯಲ್ಲಿ ಮಹತ್ತರ ಬೆಳವಣಿಗೆ ಕಂಡಿದ್ದು ಇಂದು ಕಾನೂನು ಆಯೋಗವು ದೇಶದ್ರೋಹದ ಕಾನೂನನ್ನು ಪರಾಮರ್ಶಿಸುತ್ತಿದೆ ಎಂದು ಕೇಂದ್ರ ಸಚಿವಾಲಯ ಲೋಕಸಭೆಗೆ ತಿಳಿಸಿದೆ.

ಭಾರತೀಯ ದಂಡ ಸಂಹಿತೆಯಲ್ಲಿ ದೇಶದ್ರೋಹಕ್ಕೆ ಸಂಬಂಧಿಸಿದ ಸೆ.124ಎ ಇದರ ಅವಕಾಶಗಳ ಬಳಕೆಯನ್ನು ಅಧ್ಯಯನ ಮಾಡುವಂತೆ ಕಾನೂನು ಮತ್ತು ನ್ಯಾಯ ಸಚಿವಾಲಯವು ಕಾನೂನು ಆಯೋಗವನ್ನು ಕೇಳಿಕೊಂಡಿದೆ ಎಂಬುದಾಗಿ ಗೃಹ ಸಚಿವಾಲಯ ತಿಳಿಸಿದೆ.

ಕಾನೂನು ಆಯೋಗವು ಐಪಿಸಿಯಲ್ಲಿನ ದೇಶದ್ರೋಹದ ಕಾನೂನಿನಲ್ಲಿರುವ ಕೆಲವು ಮಹತ್ವದ ಅಂಶಗಳನ್ನು ಗುರುತಿಸಿ ಆ ಬಗ್ಗೆ ಅಧ್ಯಯನ ನಡೆಸುತ್ತಿದೆ.

ಇತ್ತೀಚೆಗೆ ಜೆಎನ್‌ಯು ಆವರಣದಲ್ಲಿ ಉಗ್ರ ಅಫ್ಜಲ್‌ ಗುರುವಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ನಡೆದಿತ್ತು. ಈ ವೇಳೆ ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂದು ಆರೋಪಿಸಿ ವಿದ್ಯಾರ್ಥಿ ನಾಯಕ ಕನಗಹಯ್ಯ ಕುಮಾರ್, ಉಮರ್ ಖಲೀದ್ ಹಾಗೂ ಅನಿರ್ಬನ್ ಅವರನ್ನು ಬಂಧಿಸಲಾಗಿದೆ.

Write A Comment