ಅಂತರಾಷ್ಟ್ರೀಯ

ಚೀನಾದಿಂದ 20 ಉಪಗ್ರಹ ಉಡಾವಣೆಗೆ ಸಿದ್ಧತೆ

Pinterest LinkedIn Tumblr

chinaಬೀಜಿಂಗ್: ಬಾಹ್ಯಾಕಾಶ ವಿಜ್ಞಾನದಲ್ಲಿ ಸಾಧನೆ ಮಾಡುವ ನಿಟ್ಟಿನಲ್ಲಿ ಚೀನಾ ಮಹತ್ವದ ಹೆಜ್ಜೆ ಇಟ್ಟಿದೆ. 2016ರ ವರ್ಷಾಂತ್ಯದೊಳಗೆ 20ಕ್ಕೂ ಹೆಚ್ಚು ಉಪಗ್ರಹ ಉಡಾವಣೆ ಮಾಡಲು ನಿರ್ಧರಿಸಿದೆ. ಅಮೆರಿಕಕ್ಕಿಂತ ಹೆಚ್ಚು ಉಪಗ್ರಹಗಳನ್ನು ಹೊಂದಲು ಚೀನಾ ಕಸರತ್ತು ನಡೆಸಿದೆ ಎಂದು ಮೂಲಗಳು ತಿಳಿಸಿವೆ. 20 ಉಪಗ್ರಹಗಳಲ್ಲಿ 15 ಉಪಗ್ರಹಗಳು ಯೋಜನೆ ಅಥವಾ ಪ್ರಥಮ ಬಾಹ್ಯಾಕಾಶ ವಿಮಾನವಾಗಲಿದೆ.

ಈಗಾಗಲೇ ಚೀನಾ ತಾಂಗ್‌ಯಾಂಗ್ -2ಎಂಬ ಬಾಹ್ಯಾಕಾಶ ಪ್ರಯೋಗಾಲಯ ಸ್ಥಾಪಿಸಿದೆ. ಅಲ್ಲದೆ ಶೆನ್ಜು -11 ಎಂಬ ಬಾಹ್ಯಾಕಾಶ ವಿಮಾನವನ್ನೂ ನಿರ್ಮಿಸಿದೆ. ಚೀನಾದ ಬಾಹ್ಯಾಕಾಶ ಉದ್ದಿಮೆಯಲ್ಲಿ 2016ನೇ ಮಹತ್ವದ್ದಾಗಿದ್ದು, ಈ ವರ್ಷದಲ್ಲಿ ಎರಡು ವಿಶೇಷ ರೀತಿಯ ರಾಕೆಟನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಜೂನ್‌ನಲ್ಲಿ ಲಾಂಗ್ ಮಾರ್ಚ್-7 ಎಂಬ ಉಪಗ್ರಹ ಉಡಾವಣೆ ಮಾಡಲಿದ್ದು, ಇದು ಚೀನಾದ ಮೊದಲ ಕಾರ್ಗೋ ಶಿಪ್ ಎಂಬ ಖ್ಯಾತಿ ಗಳಿಸಲಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಲಾಂಗ್ ಮಾರ್ಚ್ -5 ಎಂಬ ಉಪಗ್ರಹ ಉಡಾವಣೆ ಮಾಡಲು ಚಿಂತನೆ ನಡೆಸಿದೆ. ಈ ರೀತಿಯ ಉಪಗ್ರಹಗಳು 25ಟನ್‌ನಷ್ಟು ಭಾರ ಹೊರುವ ಸಾಮರ್ಥ್ಯ ಹೊಂದಿವೆ.

Write A Comment