ಮನೋರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರೀತಿ ಜಿಂಟಾ

Pinterest LinkedIn Tumblr

kkkkkಲಾಸ್‌ ಎಂಜಲೀಸ್‌(ಎಜೆನ್ಸಿಸ್‌): ಖ್ಯಾತ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಅಮೆರಿಕದಲ್ಲಿ ವಿವಾಹವಾಗಿದ್ದಾರೆ ಎಂದು ಫಿಲ್ಮ್‌ಫೇರ್‌.ಕಾಮ್‌ ವೆಬ್‌ಸೈಟ್‌ ವರದಿ ಮಾಡಿದೆ.

ಸೋಮವಾರ ಸಂಜೆ ನಡೆದ ಸರಳ ಸಮಾರಂಭದಲ್ಲಿ ಗೆಳೆಯ ಜೆನೆ ಗುಡ್‌ ಎನಾಫ್‌ ಅವರನ್ನು ಮದುವೆಯಾಗಿದ್ದಾರೆ.

ಈ ವಿವಾಹ ಸಂದರ್ಭದಲ್ಲಿ ಪ್ರೀತಿ ಜಿಂಟಾ ಮತ್ತು ಜೆನೆ ಗುಡ್‌ ಅವರ ಕುಟುಂಬ ವರ್ಗದವರು ಮಾತ್ರ ಉಪಸ್ಥಿತರಿದ್ದರು ಎನ್ನಲಾಗಿದೆ.

ಪ್ರೀತಿ ಜಿಂಟಾ ಈ ಮದುವೆಗೆ ಬಾಲಿವುಡ್‌ ಗೆಳೆಯರು ಮತ್ತು ಆಪ್ತರನ್ನು ಆಹ್ವಾನಿಸಿರಲಿಲ್ಲ ಎನ್ನಲಾಗಿದೆ. ಲಾಸ್‌ಎಂಜಲೀಸ್‌ನ ಖಾಸಗಿ ಹೋಟೆಲ್‌ ನಲ್ಲಿ ವಿವಾಹ ನೆರವೇರಿತು ಎಂದು ಫಿಲ್ಮ್‌ಫೇರ್‌.ಕಾಮ್‌ ವರದಿ ಮಾಡಿದೆ.

Write A Comment