ರಾಷ್ಟ್ರೀಯ

ಜಾಟ್ ಮುಷ್ಕರ ರೈಲ್ವೆ ಮಾರ್ಗ ಸ್ಥಗಿತ

Pinterest LinkedIn Tumblr

trainಹಿಸಾರ್,ಮಾ.1: ಜಾಟ್ ಸಮುದಾಯದ ಪ್ರತಿಭಟನೆಯಿಂದಾಗಿ ರೋಹ್ಟಕ್-ದೆಹಲಿ ರೈಲ್ವೇ ಮಾರ್ಗ ಹಾನಿಗೊಂಡಿದ್ದು, ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಈ ಮಾರ್ಗದ ರೈಲ್ವೇ ಸೇವೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಧುರಿ-ಸಿರ್ಸಾ ಪ್ರಯಾಣಿಕರ ರೈಲು(54632), ಸಿರ್ಸಾ-ಲೂದಿಯಾನ ಪ್ರಯಾಣಿಕರ ರೈಲು(54633) ಮತ್ತು ಹಿಸಾರ್-ಲೂದಿಯಾನ ಪ್ರಯಾಣಿಕ ರೈಲು(54631) ಸಂಚಾರವನ್ನು ಇಂದು ಸ್ಥಗಿತಗೊಳಿಸಲಾಗಿದೆ.

ಮಾರ್ಚ್ 7ರವರೆಗೆ 12 ರೈಲುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಾತಿವಾಡ-ದೆಹಲಿ ಎಕ್ಸ್‍ಪ್ರೆಸ್, ದೆಹಲಿ-ಶ್ರೀ ಗಂಗಾನಗರ್ ಎಕ್ಸ್‍ಪ್ರೆಸ್, ಜೈಪುರ-ಚಂಡೀಘಡ ಎಕ್ಸ್‍ಪ್ರೆಸ್, ತಿಲಕ್ ಬ್ರಿಡ್ಜ್-ಸಿರ್ಸಾ ಎಕ್ಸ್‍ಪ್ರೆಸ್, ಅಜ್ಮಿರ್-ಚಂಡೀಘಡ ಗರೀಬ್ ರಥ್ ಎಕ್ಸ್‍ಪ್ರೆಸ್ ಮತ್ತು ಪಾಣಿಪತ್-ಭಿವಾನಿ ಎಕ್ಸ್‍ಪ್ರೆಸ್ ರೈಲುಗಳ ಸಂಚಾರವೂ ಸ್ಥಗಿತಗೊಂಡಿದೆ.

ಹಿಸಾರ್-ಜಿಂದ್ ಪ್ರಯಾಣಿಕರ ರೈಲು ಸಂಚಾರವನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ.

Write A Comment