ರಾಷ್ಟ್ರೀಯ

ಜಾಟ್ ಹಿಂಸಾಚಾರ 14 ಜನರ ಬಂಧನ

Pinterest LinkedIn Tumblr

arrestಚಂಡೀಘಡ,ಮಾ.1: ಮೀಸಲಾತಿಗೆ ಒತ್ತಾಯಿಸಿ ಜಾಟ್ ಸಮುದಾಯ ನಡೆಸಿದ ಚಳವಳಿ ಸಂದರ್ಭದಲ್ಲಿ ದಂಗೆ ಮತ್ತು ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡಿದ ಆರೋಪದ ಹಿನ್ನೆಲೆ 14 ಮಂದಿಯನ್ನು ಜಿಂದ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

9 ಮಂದಿಯನ್ನು ಉಚಾನಾದಲ್ಲಿ, ಮೂವರನ್ನು ಜುಲಾನಾದಲ್ಲಿ ಮತ್ತು ಸಫಿದೊನ್ ಮತ್ತು ಸದಾರ್ ಜಿಂದ್‍ನಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ.

ಜಾಟ್ ಪ್ರತಿಭಟನಾಕಾರರು ಚಳವಳಿ ಸಂದರ್ಭದಲ್ಲಿ ಮೂವರು ಮಹಿಳಾ ಅಧಿಕಾರಿಗಳ ಮೇಲೆ ಅತ್ಯಾಚಾರಕ್ಕೆ ಯತ್ನ ಮತ್ತು ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ನಾವು ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಹರ್ಯಾಣ ಪೊಲೀಸ್ ಇಲಾಖೆಯ ಡಿಐಜಿ ರಾಜಶ್ರೀ ಸಿಂಗ್ ತಿಳಿಸಿದ್ದಾರೆ.

ಕಳೆದ ಭಾನುವಾರ ಓರ್ವ ಮಹಿಳೆ ತನ್ನ ಸದೋರ ಸಂಬಂಧಿ ಸೇರಿದಂತೆ 7 ಮಂದಿಯಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ದೂರು ನೀಡಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದರು.

ಪ್ರತಿಭಟನೆಯ ಹಿನ್ನೆಲೆ 2.44 ಕೋಟಿ ರೂ.ಗಳಷ್ಟು ಸರ್ಕಾರದ ಆಸ್ತಿ-ಪಾಸ್ತಿಗಳಿಗೆ ನಷ್ಟವಾಗಿದೆ. 152 ಮಂದಿಯ ಆಸ್ತಿಗಳಿಗೆ ಹಾನಿಯಾಗಿದೆ. ನಷ್ಟ ಅನುಭವಿಸಿರುವವರಿಗೆ ಪರಿಹಾರ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

Write A Comment