ರಾಷ್ಟ್ರೀಯ

ಪಠಾಣ್‌ಕೋಟ್‌ ದಾಳಿಯಲ್ಲಿ ‘ಹೊರಗಿನವರ’ ಕೈವಾಡ: ಪರಿಕ್ಕರ್‌

Pinterest LinkedIn Tumblr

Manoharwebನವದೆಹಲಿ (ಪಿಟಿಐ): ಜನವರಿಯಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲೆ ದಾಳಿ ನಡೆಸಿದವರು ಪಾಕ್‌ ಮೂಲದ ಉಗ್ರರು. ಈ ಕೃತ್ಯದಲ್ಲಿ ಪಾಕ್‌ ಸರ್ಕಾರದ ಬೆಂಬಲ ಇರುವ ‘ಹೊರಗಿನ ವ್ಯಕ್ತಿಗಳ’ ಕೈವಾಡವೂ ಇದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತನಿಖೆ ಪೂರ್ಣಗೊಂಡ ನಂತರ ಈ ಕುರಿತು ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ. ಆದರೆ, ಖಂಡಿತವಾಗಿಯೂ ಈ ದಾಳಿಯಲ್ಲಿ, ಪಾಕ್‌ ಮೂಲದ ‘ನಾನ್‌ ಸ್ಟೇಟ್ ಆ್ಯಕ್ಟರ್ಸ್‌’ಗಳ ಕೈವಾಡ ಇದ್ದೇ ಇದೆ ಎಂದು ಅವರು ಹೇಳಿದರು.

ಸರ್ಕಾರದ ಸಂಪೂರ್ಣ ಬೆಂಬಲ ಇಲ್ಲದೆ ಯಾವುದೇ ರೀತಿಯಲ್ಲಿ ‘ಹೊರಗಿನ ವ್ಯಕ್ತಿಗಳು’ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಪಠಾಣ್‌ಕೋಟ್‌ ದಾಳಿ ಕೂಡ ಈ ರೀತಿ ನಡೆದಿದೆ ಎಂದು ಪರಿಕ್ಕರ್‌ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ಪಠಾಣ್‌ಕೋಟ್‌ ಮೇಲಿನ ದಾಳಿಯು ಕೇವಲ ಒಂದು ಭಯೋತ್ಪಾದನೆ ದಾಳಿಯೇ ಅಥವಾ ಪಾಕ್‌ ಸೇನೆಯ ಬೆಂಬಲದೊಂದಿಗೆ ನಡೆದ ಸಶಸ್ತ್ರ ಕಾರ್ಯಾಚರಣೆಯೇ ಎಂದು ಶಿವಸೇನಾ ಸದಸ್ಯ ಸಂಜಯ್‌ ರಾವತ್‌ ಕೇಳಿದ್ದ ಪ್ರಶ್ನೆಗೆ ಅವರು ಉತ್ತರಿಸಿದರು.

Write A Comment