ಅಂತರಾಷ್ಟ್ರೀಯ

ಬಹುಪಯೋಗಿ ನೇರಳೆಹಣ್ಣು…ಆರೋಗ್ಯ ಸುಧಾರಣೆ

Pinterest LinkedIn Tumblr

indian_black_berry_or_java_plum

ನೇರಳೆಹಣ್ಣಿನ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಂತೂ ಇದೆ. ನೇರಳೆಹಣ್ಣು ಎಲ್ಲ ಸೀಸನ್‌ಗಳಲ್ಲೂ ಸಿಗಲ್ಲ ಕೆಲವೊಮ್ಮೆ ದುಬಾರಿ ಎನಿಸಿದರೂ, ಖರೀದಿಸಿ ತಿಂದರೆ ನಿಮ್ಮ ಆರೋಗ್ಯ ಸುಧಾರಣೆಗೆ ನೆರವಾಗಲಿದೆ.

ನೇರಳೆಹಣ್ಣು ಸೌಂದರ್ಯವರ್ಧಕ ಹಾಗೂ ಆರೋಗ್ಯಕಾರಕ. ವರ್ಷಕ್ಕೊಮ್ಮೆ ಒಂದೆರಡು ತಿಂಗಳಲ್ಲಿ ಮಾತ್ರ. ನೇರಳೆಹಣ್ಣು ಮಾರುಕಟ್ಟೆಯಲ್ಲಿ ಲಭ್ಯ. ಸಿಕ್ಕಾಗ ಮರೆಯದೆ ಖರೀದಿಸಿ ತಿನ್ನಬೇಕು.

ನೇರಳೆಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಶ್ರಿಣ ಮಾಡಿ, ಅದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಂಡರೆ, ಮೊಡವೆ ಕಲೆಗಳನ್ನು ನಿಯಂತ್ರಿಸಬಹುದು. ಕೆಲವು ದಿನ ಇದೇ ರೀತಿ ಮಾ‌ಡಿದರೆ ಅದರ ಫಲಿತಾಂಶ ಕಾಣಸಿಗುತ್ತದೆ.

ನೇರಳೆಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ಅದೇ ಕಾರಣಕ್ಕಾಗಿ ಹಲ್ಲಿನ ಆರೋಗ್ಯ ಸುಧಾರಣೆಗೆ ತಯಾರಿಸುವ ಔಷಧಿಗಳಲ್ಲಿ ನೇರಳೆಹಣ್ಣನ್ನು ಬಳಸಲಾಗುತ್ತದೆ.

ಮತ್ತೊಂದು ಮುಖ್ಯವಾದ ಅಂಶವೆಂದರೆ, ನೇರಳೆ ಎಳೆಗಳನ್ನು ತಿನ್ನುವುದರಿಂದ ಬಾಯಿಯಿಂದ ಹೊರಬರುವ ದುರ್ವಾಸನೆ ದೂರವಾಗಲಿದೆ.

ಮಧುಮೇಹ ರೋಗಿಗಳಿಗೂ ನೇರಳೆಹಣ್ಣು ಉಪಯುಕ್ತವಾಗಿದೆ. ನೇರಳೆಹಣ್ಣಿನಲ್ಲಿ ಜಾಂಬೋಲಿನ ಎಂಬ ವಿಶೇಷ ಗ್ಲೂಕೋಸ್ ಅಂಶವಿದ್ದು, ಇದು ಆರೋಗ್ಯ ಸುಧಾರಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ.

ಅಜೀರ್ಣ ಸಮಸ್ಯೆ ಬಹುತೇಕ ಜನರನ್ನು ಕಾ‌ಡಲಿದೆ. ಹಾಗಿದ್ದಲ್ಲಿ, ನೇರಳೆಹಣ್ಣಿನ ಜ್ಯೂಸ್ ಕುಡಿಯುವುದರಿಂದ ಈ ಸಮಸ್ಯೆಗೂ ಪರಿಹಾರ ದೊರೆಯಲಿದೆ.

ನೇರಳೆಹಣ್ಣಿನಲ್ಲಿ ಕಬ್ಬಿನಾಂಶ ಹೇರಳವಾಗಿದ್ದು, ರಕ್ತ ಶುದ್ಧೀಕರಿಸುವ ಶಕ್ತಿಯನ್ನು ಹೊಂದಿದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಲು ನೇರಳೆಹಣ್ಣು ಸಹಕಾರಿಯಾಗಲಿದೆ.

ಇಷ್ಟು ಮಾತ್ರವಲ್ಲ, ಮಹಿಳೆಯರಲ್ಲಿನ ಋತುಚಕ್ರ ಸಮಸ್ಯೆಗೂ ನೇರಳೆಹಣ್ಣು ಸೇವನೆಯಿಂದ ಮುಕ್ತಿ ದೊರೆಯಲಿದೆ.

ಕೆಲವರಿಗೆ ಆಯಿಲ್ ಸ್ಕಿನ್ ಇರುತ್ತದೆ. ನೇರಳೆಹಣ್ಣಿನ ಸೇವನೆಯಿಂದ ತ್ವಚೆಯಲ್ಲಿನ ಎಣ್ಣೆಯನ್ನು ನಿಯಂತ್ರಿಸಲಿದೆ.

ನೇರಳೆಹಣ್ಣಿನ ಸಿಪ್ಪೆ, ಬಾರ್ಲಿಪೌಡರ್, ರೋಸ್ ವಾಟರ್ ಮತ್ತು ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿಕೊಂಡರೆ, ಮುಖದ ಕಾಂತಿ ವೃದ್ಧಿಯಾಗಲಿದೆ.

ಮುಖದ ಮೇಲೆ ಕಪ್ಪು ಕಲೆಗಳಿದ್ದರೆ ನೇರಳೆಹಣ್ಣು ಅವುಗಳನ್ನು ನಿವಾರಣೆ ಮಾಡಲಿದೆ. ಒಂದು ರೀತಿ ರಾಮಬಾಣದಂತೆ ಕೆಲಸ ಮಾಡಲಿದೆ ಎಂದರೂ ತಪ್ಪಾಗಲಾರದು.

ಸುಲಭವಾಗಿ ನಮಗೆ ಲಭ್ಯವಾಗುವ ನೀರಳೆಹಣ್ಣು ತಿನ್ನುವ ಮೂಲಕ ಸೌಂದರ್ಯ ಹಾಗೂ ಆರೋಗ್ಯ ವೃದ್ಧಿಗೆ ನಾವೇಕೆ ಪ್ರಯತ್ನಿಸಬಾರದು…ಅಲ್ಲವೇ?

Write A Comment