ಅಂತರಾಷ್ಟ್ರೀಯ

ಗೊರಕೆ ಸಮಸ್ಯೆ: ಪರಿಹಾರ

Pinterest LinkedIn Tumblr

gorake

ಗೊರಕೆ ಬಹುತೇಕರನ್ನು ಕಾಡುವ ಸಮಸ್ಯೆ. ನಿದ್ರೆಯಲ್ಲಿ ಗೊರಕೆ ಹೊಡೆಯುವ ಸಮಸ್ಯೆ ಸಣ್ಣದು ಎನಿಸಿದರು ಅದು ಇತರರಿಗೆ ದೊಡ್ಡದೇ ಆಗಿರುತ್ತದೆ. ಗೊರಕೆ ಹೊಡೆಯುವ ವ್ಯಕ್ತಿಗಿಂತ ಅವರ ಸುತ್ತಮುತ್ತ ಇರುವವರಿಗೆ ಇದರಿಂದ ಸಮಸ್ಯೆ ಹೆಚ್ಚು. ಯಾರಾದರೂ ಆಗಾಗ ಗೊರಕೆಯೊಡೆಯುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಆದರೆ ನಿತ್ಯದ ಅಭ್ಯಾಸವಾದರೆ ಅವರ ಪಕ್ಕ ನಿದ್ರಿಸುವ ವ್ಯಕ್ತಿಗೆ ಹಾಗೂ ಗೊರಕೆ ವ್ಯಕ್ತಿಗೆ ಕಿರಿಕಿರಿ ನಿಶ್ಚಿತ.

ಗೊರಕೆ ಉಂಟಾಗುವುದು ಮೂಗಿನಲ್ಲಿ ಗಾಳಿಯಾಡುವ, ಕಿರುದಾರಿಯಲ್ಲಿ ಉಂಟಾಗುವ ಆಡಚಣೆಗಳಿಂದ ಇದು ಮಹಿಳೆಯರು ಹಾಗೂ ಪುರುಷರಲ್ಲಿ ಇಬ್ಬರಲ್ಲೂ ಕಂಡು ಬರುತ್ತದೆ. ಅದರಲ್ಲೂ ಬೊಜ್ಜಿರುವ ವ್ಯಕ್ತಿಗಳಲ್ಲಿ ಗೊರಕೆ ಸಮಸ್ಯೆ ಹೆಚ್ಚು. ವಯಸ್ಸಾದಂತೆ ಈ ಗೊರಕೆ ಸಮಸ್ಯೆ ಹೆಚ್ಚಾಗುತ್ತದೆ. ಒಂದು ಅಂದಾಜಿನ ಪ್ರಕಾರ ಶೇಕಡ 50 ರಷ್ಟು ಪುರುಷರು ಗೊರಕೆ ಸಮಸ್ಯೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಮಲಗಿರುವಾಗ ಮೂಗಿನ ಕುಹರ ಅಥವಾ ಅಂಗಳು ಮತ್ತು ಗಂಟಲಿನ ಸ್ನಾಯಗಳು ಸಡಿಲಗೊಂಡು ಜೋತುಬೀಳುತ್ತವೆ. ಇದರಿಂದ ಮೂಗಿನಲ್ಲಿ ಗಾಳಿಯಾಡುವ ದಾರಿ ಕಿರಿದಾಗುತ್ತದೆ. ಹಾಗೂ ಮೃಧುವಾದ ಅಂಗಾಂಶಗಳು ಖಂಡಿಸಿ ಗೊರಕೆಯುಂಟು ಮಾ‌ಡುತ್ತದೆ. ಬಾಯಿಯ ಸಮಸ್ಯೆ, ಮೂಗಿನ ಸುತ್ತ ಸೈನಸ್, ಮಧ್ಯ ಸೇವನೆ, ಅಲರ್ಜಿ, ನೆಗಡಿ, ದೇಹ ತೂಕ ಹೆಚ್ಚಳ ಇತ್ಯಾದಿಗಳು ಗೊರಕೆ ಸಮಸ್ಯೆಗೆ ಕಾರಣವಾಗಿದೆ.

ಗೊರಕೆಯಿಂದ ಏಕಾಗ್ರತೆಯ ಕೊರತೆ, ಗಂಟಲು ನೋವು, ಅಧಿಕ ರಕ್ತದೊತ್ತಡ ರಾತ್ರಿ ವೇಳೆ ಎದೆನೋವು ಮತ್ತಿತರರ ಸಮಸ್ಯೆಗಳು ತಲೆದೋರಬಹುದು. ಗೊರಕೆ ಸಮಸ್ಯೆ ಗಂಭೀರ ಎನಿಸಿದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದು ಗೊರಕೆಯಿಂದ ಮುಕ್ತರಾಗಬಹುದು.

Write A Comment