ಮನೋರಂಜನೆ

ಗೂಗಲ್ ಇಂದು 2GB ಹೆಚ್ಚುವರಿ ಡ್ರೈವ್ ಜಾಗವನ್ನು ಉಚಿತವಾಗಿ ನೀಡುತ್ತಿದೆ

Pinterest LinkedIn Tumblr

gdrive1

ಗೂಗಲ್ ಇಂದು 2GB ಹೆಚ್ಚುವರಿ ಡ್ರೈವ್ ಜಾಗವನ್ನು ಉಚಿತವಾಗಿ ನೀಡುತ್ತಿದೆ. ಅದರ ವಾರ್ಷಿಕ ಸಂಪ್ರದಾಯದಂತೆ, ಗೂಗಲ್ ಮತ್ತೆ ಸಂಕ್ಷಿಪ್ತ ಖಾತೆ ಭದ್ರತಾ ತಪಾಸಣೆಯನ್ನು ಪೂರ್ಣಗೊಳಿಸಿದ ಬಳಕೆದಾರರಿಗೆ “ಗೂಗಲ್ ಡ್ರೈವ್” ಉಚಿತ ಸಂಗ್ರಹ ಜಾಗವನ್ನು ಒದಗಿಸುತ್ತಿದೆ. ಈ ತಪಾಸಣೆಯಲ್ಲಿ 2-Step ಸೆಟ್ಟಿಂಗ್ಸ್, ನಿಮ್ಮ ಖಾತೆ ಮಾಹಿತಿ ಮತ್ತು ನೀವು ಬಳಸುತ್ತಿರುವ Apps ಪರಿಶೀಲಿಸಿದ ಬಳಿಕ 2GB ಹೆಚ್ಚುವರಿ ಜಾಗವನ್ನು ನಿಮ್ಮ ಖಾತೆಗೆ ಉಚಿತವಾಗಿ ಸೇರಿಸಲಾಗುತ್ತದೆ. ಈ ವಿಧಾನವನ್ನು 2 ನಿಮಿಷಗಳಿಗಿಂತಲೂ ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದಾಗಿದೆ.

gdrive2

ಗೂಗಲ್ ಈ ತರಹದ ಪ್ರಚಾರವನ್ನು ಹಿಂದಿನ ವರ್ಷವೂ ನಡೆಸಿತ್ತು. ನೀವು ಹಿಂದಿನ ಪ್ರಚಾರದ ವೇಳೆ 2GBಉಚಿತ ಜಾಗವನ್ನು ಪದೆದಿದ್ದಿರಾದರೆ, ಈ ಬಾರಿಯೂ ಮತ್ತೊಮ್ಮೆ ಪಡೆಯಬಹುದಾಗಿದೆ.

ನಿಮ್ಮ ಉಚಿತ 2GB ಜಾಗವನ್ನು ಖಾದಿರಿಸಲು ದಯವಿಟ್ಟು ಈ ಕೊಂಡಿಯನ್ನು ಕ್ಲಿಕ್ ಮಾಡಿ.
https://security.google.com/settings/security/secureaccount

He is a Software Engineer from Moodbidri currently living in Kuwait. He likes to travel and post interesting things about technology. He is the designer of Kannadigaworld.com. You may follow him on FB at fb.com/alanpaladka

Write A Comment