ಅರ್ಜುನ್ ಕಪೂರ್ ಹಾಗೂ ಕರೀನಾ ಕಪೂರ್ ಅಭಿನಯದ ಕೀ ಅಂಡ್ ಕ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಅರ್ಜುನ್ ಕಪೂರ್ ತಮ್ಮ ಸಹ ನಟಿ ಕರೀನಾ ಕಪೂರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
30 ವರ್ಷದ ಅರ್ಜುನ್ ಕಪೂರ್ ನಾನು ಕರೀನಾ ಕಪೂರ್ ಅವರ ದೊಡ್ಡ ಅಭಿಮಾನಿ. ಕರೀನಾ ಅವರು ಅದ್ಭುತ ನಟಿ ಅವರೊಂದಿಗೆ ನಟಿಸುವುದೆಂದರೆ ಅದ್ಭುತ ಎಂದು ಹೇಳಿದ್ದಾರೆ.
ಕರೀನಾ ಕಪೂರ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿದ್ದು, ಅದ್ಭುತ ಅನುಭವ ಎಂದು ಕಪೂರ್ ಹೇಳಿದ್ದಾರೆ.
ಬಾಲ್ಕಿ ನಿರ್ದೇಶನದ ಕೀ ಅಂಡ್ ಕ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಹಾಗೂ ಜಯ ಬಚ್ಚನ್ ಸಹ ಅಭಿನಯಿಸುತ್ತಿದ್ದು, ಚಿತ್ರ ಏಪ್ರಿಲ್ 1ಕ್ಕೆ ಬಿಡುಗಡೆಯಾಗಲಿದೆ.