ಕರ್ನಾಟಕ

ಪರಪ್ಪನ ಅಗ್ರಹಾರದಲ್ಲಿ ವಿಶೇಷ ಭದ್ರತೆಯಲ್ಲಿರುವ ಪಾಕ್ ಕೈದಿ ಬಳಿ ಸ್ಮಾರ್ಟ್‌ಫೋನ್ ಪತ್ತೆ

Pinterest LinkedIn Tumblr

pakಬೆಂಗಳೂರು, ಫೆ.7-ಕಳೆದ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಹಿರಿಯ ಅಧಿಕಾರಿಗಳು ದಾಳಿ ನಡೆಸಿದಾಗ ವಿಶೇಷ ಭದ್ರತೆಯಲ್ಲಿ ಸೆಲ್‌ನಲ್ಲಿದ್ದ ಪಾಕ್ ಕೈದಿ ಬಳಿ ಸ್ಮಾರ್ಟ್ ಫೋನ್ ಪತ್ತೆಯಾಗಿದೆ.

ರಾತ್ರಿ 10.30ರಲ್ಲಿ ಹೆಚ್ಚುವರಿ ಜೈಲು ಅಧೀಕ್ಷಕ ಮರಿಗೌಡ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ ಕೈಗೊಂಡು ಪರಿಶೀಲನೆ ನಡೆಸಿದಾಗ ಪಾಕ್‌ನ ಕೈದಿ ಪಹದ್ ಬಳಿ ಸ್ಮಾರ್ಟ್ ಫೋನ್ ಪತ್ತೆಯಾಗಿದೆ. ಇದಲ್ಲದೆ, ಹಲವು ಕೈದಿಗಳ ಬಳಿ ಕೂಡ ಮೊಬೈಲ್‌ಗಳು ಸಿಕ್ಕಿದ್ದು, ಇವುಗಳು ಯಾರು ತಂದುಕೊಟ್ಟರು ಎಂಬುದರ ಬಗ್ಗೆ ತನಿಖೆ ಆರಂಭಗೊಂಡಿದೆ.

ಕಳೆದ ಹಲವು ದಿನಗಳಿಂದ ಕೈದಿ ಚಲನವಲನಗಳನ್ನು ಗಮನಿಸಲಾಗುತ್ತಿದ್ದು, ಜೈಲಿನ ಆಸುಪಾಸಿನ ಟವರ್‌ಗಳಿಂದ ವಿವಿಧೆಡೆಗೆ ನೆರೆ ರಾಜ್ಯ ಹಾಗೂ ಬೆಂಗಳೂರಿನ ಕೆಲವೆಡೆ ದೂರವಾಣಿ ಕರೆ ಮಾಡುತ್ತಿರುವ ಸಿಗ್ನಲ್‌ಗಳು ಪತ್ತೆಯಾಗಿವೆ.

ಇದನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಅಧೀಕ್ಷಕರು ಯಾವುದೇ ಮುನ್ಸೂಚನೆ ನೀಡದೆ ಪರಿಶೀಲನೆ ಕೈಗೊಂಡಾಗ ಅಕ್ರಮಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿವೆ. ಸುಮಾರು 10 ಮೊಬೈಲ್‌ಗಳು ಸಿಕ್ಕಿವೆ ಎಂದು ಹೇಳಲಾಗಿದ್ದು, ಪಾಕ್‌ನ ಕೈದಿ ಯಾರ್ಯಾ್ರಿಗೆ ಕರೆ ಮಾಡಿದ್ದಾನೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ತೀವ್ರ ನಿಗಾ ವಹಿಸಿ ವಿಶೇಷ ಭದ್ರತೆ ಕಲ್ಪಿಸಿರುವ ಸೆಲ್‌ನಲ್ಲೇ ಕೈದಿಗಳಿಗೆ ರಾಜೋಪಚಾರ ನಡೆಯುತ್ತಿದೆ ಎಂಬ ಬಗ್ಗೆ ಆಗಾಗ ದೂರುಗಳು ಬರುತ್ತಿತ್ತು. ಈಗ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿದೆ.

Write A Comment