ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಧಾನಿ ನರೇಂದ್ರ ಮೋದಿಯವರೊಡನೆ ಕೆಳೆದ ತಮ್ಮ ಜೀವನದ ಅತ್ಯುತ್ತಮ ಕ್ಷಣಗಳನ್ನು ಟ್ವೀಟರ್ನಲ್ಲಿ ಪ್ರಕಟಿಸಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದಿರುವ ನೌಕಾಪಡೆ ಕವಾಯತಿನಲ್ಲಿ ಭಾಗವಹಿಸಿರುವಾಗ ಮೋದಿ ಮನಪೂರ್ವಕವಾಗಿ ನಗುತ್ತಾ ಅಕ್ಷಯ್ ಕುಮಾರ್ರ ಮಗ ಆರವ್ ನ ಕಿವಿ ಹಿಂಡುತ್ತಾ “ಗುಡ್ ಬಾಯ್’ ಎಂದು ಹೇಳುತ್ತಿರುವ ಚಿತ್ರವನ್ನು ಅಕ್ಷಯ್ ಟ್ವೀಟರ್ನಲ್ಲಿ ಹಂಚಿಕೊಂಡಿದ್ದಾರೆ.
“ತಂದೆಯ ಜೀವನದ ಹೆಮ್ಮೆಯ ಘಳಿಗೆ. ದೇಶದ ಪ್ರಧಾನಿ ನನ್ನ ಮಗನ ಕಿವಿ ಎಳೆದು ಆತನನ್ನು ಗುಡ್ ಬಾಯ್ ಎಂದು ಕರೆದಿದ್ದು’ ಎಂದು ಚಿತ್ರಕ್ಕೆ ಅಡಿ ಬರಹ ನೀಡಿದ್ದಾರೆ.
-ಉದಯವಾಣಿ