ನವದೆಹಲಿ: ಕೆಮ್ಮು ಹಾಗೂ ಮಧುಮೇಹಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿ ಇಂದು ಬೆಂಗಳೂರಿನಿಂದ ತೆರಳಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾರತದ ಇತಿಹಾಸದಲ್ಲೇ ಹೊಸ ಪ್ರಯೋಗವೊಂದನ್ನು ಮಾಡಲಿದ್ದಾರೆ.
ಅದೇನೆಂದರೆ, ದೆಹಲಿಗೆ ಅರ್ಧ ದಿನ ಅವರು ಮುಖ್ಯಮಂತ್ರಿಯಾಗಿರುವುದು ಹಾಗೂ ಇನ್ನರ್ಧ ದಿನ ಈಗಿನ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಮುಖ್ಯಮಂತ್ರಿ ಮಾಡುವುದು. ಕೇಜ್ರಿವಾಲ್ ಹೀಗೆ ಮಾಡುತ್ತಿರುವುದಕ್ಕೆ ಕಾರಣವಿದೆ.ಅವರಿಗೆ ಕೆಮ್ಮು ಹಾಗೂ ಡಯಾಬಿಟೀಸ್ ಮತ್ತೂಮ್ಮೆ ಬರಬಾರದು ಅಂದರೆ ಪ್ರತಿದಿನ ಯೋಗ, ಪ್ರಾಣಾಯಮ, ಧ್ಯಾನ, ಪ್ರಕೃತಿ ಚಿಕಿತ್ಸೆ ಹಾಗೂ ಪಥ್ಯ ಮಾಡ ಬೇಕೆಂದು ಬೆಂಗಳೂರಿನ ವೈದ್ಯರು ಸೂಚಿಸಿದ್ದಾರೆ.
ಇವೆಲ್ಲವನ್ನೂ ಅವರು ಮಾಡುತ್ತ ಕುಳಿತರೆ ಕಚೇರಿಗೆ ಹೋಗುವುದು ಕಷ್ಟವಾಗುತ್ತದೆ. ಹಾಗಾಗಿ ಅರ್ಧ ದಿನ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ, ಇನ್ನರ್ಧ ದಿನ ಧ್ಯಾನ ಮಾಡಲು ಕೇಜ್ರಿವಾಲ್ ನಿರ್ಧರಿಸಿದ್ದಾರೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲದಿರುವುದರಿಂದ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಅವರು ನಾಳೆಯಿಂದ ಪ್ರತಿಭಟನೆಯನ್ನೂ ಮಾಡಲಿದ್ದಾರೆ.
-ಉದಯವಾಣಿ