ಮನೋರಂಜನೆ

ಶೀನಾ ಬೋರಾ ಕೊಲೆ ಪ್ರಕರಣದ ಬಂಗಾಲಿ ಸಿನೇಮಾ ಫೆಬ್ರವರಿಯಲ್ಲಿ ತೆರೆಗೆ

Pinterest LinkedIn Tumblr

Indrani-Mukharjee1-700ಕೋಲ್ಕತ : ಅತ್ಯಂತ ನಿಗೂಢ ಹಾಗೂ ರೋಮಾಂಚಕವೆನಿಸಿರುವ ಶೀನಾ ಬೋರಾ ಕೊಲೆ ಪ್ರಕರಣ ಮಾಹಿತಿಯನ್ನು ಅಧರಿಸಿದ ಚಿತ್ರ ಕಥೆ ಹೊಂದಿರುವ “ಡಾರ್ಕ್‌ ಚಾಕೋಲೇಟ್‌’ ಎಂಬ ಹೆಸರಿನ ಬಂಗಾಲಿ ಸಿನೇಮಾ ಮುಂದಿನ ಫೆಬ್ರವರಿ ತಿಂಗಳಲ್ಲಿ ತೆರೆ ಕಾಣಲಿದೆ.

ಬಾಲಿವುಡ್‌ ತಾರೆ ಮಹಿಮಾ ಚೌಧರಿ ಅವರು ಇಂದ್ರಾಣಿ ಮುಖರ್ಜಿ ಪಾತ್ರದಲ್ಲೂ , ರಿಯಾ ಸೇನ್‌ ಅವರು ಶೀನಾ ಬೋರಾ ಪಾತ್ರದಲ್ಲೂ ಕಾಣಿಸಲಿದ್ದಾರೆ. ಡಾರ್ಕ್‌ ಚಾಕೋಲೇಟ್‌ ಚಿತ್ರದ ಚಿತ್ರೀಕರಣವನ್ನು ನಗರದಲ್ಲಿ ಹಾಗೂ ಬಂಗಾಲದ ಇತರ ಹಲವು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ.

“ನಾನು ಶೀನಾ ಬೋರಾ ಕೊಲೆ ಕೇಸಿನ ಸಾಕ್ಷ್ಯ ಚಿತ್ರ ನಿರ್ಮಿಸಲು ಬಯಸಿರಲಿಲ್ಲ. ಹಾಗಾಗಿ ನೈಜ ಪ್ರಕರಣದಲ್ಲಿ ಇರುವಂತಹ ಅನೇಕ ತಿರುವುಗಳು, ಸಂಚುಗಳು, ಕೌತುಕ, ರೋಮಾಂಚನ ಇತ್ಯಾದಿಗಳೆಲ್ಲವನ್ನೂ ಚಿತ್ರ ಕಥೆಯೊಳಗೆ ಇಳಿಸಿಕೊಂಡು ಅಪ್ಪಟ ವಾಣಿಜ್ಯ ಸಿನೇಮಾ ಮಾಡಿದ್ದೇನೆ’ ಎಂದು ಚಿತ್ರದ ನಿರ್ದೇಶಕ ಅಗ್ನಿದೇವ ಚಟರ್ಜಿ ಹೇಳಿದ್ದಾರೆ.

“ನೋ ವನ್‌ ಕಿಲ್ಡ್‌ ಜೆಸ್ಸಿಕಾ’ ಚಿತ್ರದ ನಟ ರಾಜೇಶ್‌ ಶರ್ಮಾ ಅವರು “ಡಾರ್ಕ್‌ ಚಾಕೋಲೇಟ್‌’ ಚಿತ್ರದಲ್ಲಿ ಇಂದ್ರಾಣಿ ಮುಖರ್ಜಿಯ ಕಾರು ಚಾಲಕನ ಪಾತ್ರ ನಿಭಾಯಿಸಿದ್ದಾರೆ. ಕೌಶಿಕ್‌ ಸೇನ್‌ ಅವರು ಪೀಟರ್‌ ಮುಖರ್ಜಿ ಪಾತ್ರ ನಿರ್ವಹಿಸಿದ್ದಾರೆ. ಸಂಜೀವ್‌ ಖನ್ನಾ ಪಾತ್ರವನ್ನು ಶತಾಫ್ ಫಿಗಾರ್‌ ನಿರ್ವಹಿಸಿದ್ದಾರೆ.
-ಉದಯವಾಣಿ

Write A Comment