ಮನೋರಂಜನೆ

ಏಕ ದಿನ ಸರಣಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

Pinterest LinkedIn Tumblr

manish1ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲೂ ಆಸೀಸ್ ವಿರುದ್ಧ ಟೀಂ ಇಂಡಿಯಾ 6 ವಿಕೆಟ್ ಗಳ ಜಯ ದಾಖಲಿಸುವ ಮೂಲಕ ವೈಟ್‌ ವಾಶ್‌ ನಿಂದ ತಪ್ಪಿಸಿಕೊಂಡಿದೆ.

ಭಾರತೀಯ ಬೌಲರ್​ಗಳ ಮೇಲೆ ಸವಾರಿ ಮಾಡಿದ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳು ಬೃಹತ್ ಮೊತ್ತ ಕಲೆ ಹಾಕಿ, ಭಾರತಕ್ಕೆ 331 ರನ್ ಗೆಲುವಿನ ಗುರಿ ನೀಡಿತ್ತು.

ಬೃಹತ್‌ ಸವಾಲನ್ನು ಬೆನ್ನಟ್ಟಿದ ಭಾರತ, ಕನ್ನಡಿಗ ಮನಿಷ್‌ ಪಾಂಡೆ ಅವರ ಭರ್ಜರಿ ಶತಕ, ರೋಹಿತ್‌ ಶರ್ಮಾ ಮತ್ತು ನಾಯಕ ಧೋನಿ ಅವರ ಸಮಯೋಚಿತ ಆಟದಿಂದಾಗಿ 49.4 ಓವರ್‌ಗಳಲ್ಲಿಯೇ ಗುರಿ ಮುಟ್ಟಿ ಸೋಲಿನ ಸರಣಿಯಿಂದ ಹೊರ ಬಂದಿತು.

ಸರಣಿಯುದ್ದಕ್ಕೂ ಅಮೋಘ ನಿರ್ವಹಣೆ ನೀಡಿದ್ದ ಆರಂಭಿಕ ಆಟಗಾರ ರೋಹಿತ್‌ ಶರ್ಮಾ 99 ರನ್‌ಗಳಿಸಿ, ಸರಣಿ ಶ್ರೇಷ್ಠನಾದರೆ, ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಮನಿಷ್ ಪಾಂಡೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಭರ್ಜರಿ ಬ್ಯಾಟಿಂಗ್‌ ಮಾಡಿದ ಶಿಖರ್ ಧವನ್‌ 56 ಎಸೆತಗಳಲ್ಲಿ 78 ರನ್‌ಗಳಿಸಿ ಔಟಾದರು.ಕೊಹ್ಲಿ 8 ರನ್‌ಗೆ ನಿರ್ಗಮಿಸಿದರು.

Write A Comment