ಅಂತರಾಷ್ಟ್ರೀಯ

ಕೆನಡಾ ಶಾಲೆಯಲ್ಲಿ ಶೂಟೌಟ್ : ಐವರು ಸಾವು, ಮೂವರು ಗಂಭೀರ

Pinterest LinkedIn Tumblr

kenadaಒಟ್ಟಾವಾ(ಕೆನಡಾ)ಜ.23-ಕೆನಡಾದ ಸಾಸ್ನಾಚೇವನ್‌ನ ಪಶ್ಚಿಮಪ್ರಾಂತ್ಯದ ಪ್ರೌಢಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಲಾಲೋಚೆ ನಗರದ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆಯ ಬಳಿಗೆ ಬರದಂತೆ ಪೊಲೀಸರು ಪೋಷಕರಿಗೆ ಸೂಚಿಸಿದ್ದಾರೆ. ಸಮೀಪದಲ್ಲಿರುವ ಎಲಿಮೆಂಟರಿ ಶಾಲೆಯನ್ನು ಮುಚ್ಚಲಾಗಿದೆ. ಕಳೆದ 25ವರ್ಷಗಳ ಅವಧಿಯಲ್ಲಿ ನಡೆದಿರುವ ಹೇಯಕೃತ್ಯ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದೂಕುಧಾರಿ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ.

ನಿನ್ನೆ ಮಧ್ಯಾಹ್ನ 1ಗಂಟೆ ವೇಳೆಗೆ ಶಾಲೆಗೆ ನುಗ್ಗಿದ ವ್ಯಕ್ತಿ 6-7ಬಾರಿ ಗುಂಡು ಹಾರಿಸಿದ್ದಾನೆ. ಈ ಹಂತಕ ಬಹುಶಃ ಅದೇ ಶಾಲೆಯ ಹಳೆ ವಿದ್ಯಾರ್ಧಿ ಇರಬಹುದೆಂದು ಶಂಕಿಸಲಾಗಿದೆ.

Write A Comment