ರಾಷ್ಟ್ರೀಯ

70 ವರ್ಷದ ಹಿಂದಿನ ಸೀಕ್ರೆಟ್ ಔಟ್; ನೇತಾಜಿ ಕುರಿತ ಕಡತ ರಿಲೀಸ್

Pinterest LinkedIn Tumblr

modi650-1_63589164688618530ನವದೆಹಲಿ: ಹೌದು ಇವತ್ತು ಭಾರತೀಯರೆಲ್ಲರಿಗೂ ವಿಶೇಷವಾದ ದಿನ, ಯಾಕೆಂದರೆ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 119ನೇ ಜನ್ಮ ದಿನದಂದೇ ಸುಮಾರು 70 ವರ್ಷಗಳ ಬಳಿಕ ಎನ್ ಡಿಎ ನೇತೃತ್ವದ  ಕೇಂದ್ರ ಸರಕಾರ ಮೊದಲ ಬಾರಿಗೆ ನೇತಾಜಿಗೆ ಸಂಬಂಧಿಸಿದ 100 ರಹಸ್ಯ ಕಡತಗಳನ್ನು ಶನಿವಾರ ಬಿಡುಗಡೆಗೊಳಿಸಿದೆ.

100 ಕಡತಗಳ ಡಿಜಿಟಲ್‌ ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿಗೆ ಸಂಬಂಧಿಸಿದ ಕಡತಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಕುಟುಂಬಿಕರು ಹಾಜರಿದ್ದರು.  ನೇತಾಜಿ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ರಾಷ್ಟ್ರೀಯ ಪತ್ರಾಗಾರ ಇಲಾಖೆ ಈಗಾಗಲೇ ಡಿಜಿಟಲೀಕ ರಣಗೊಳಿಸಿದೆ. ಶನಿವಾರ ನೇತಾಜಿ  ಜನ್ಮ ದಿನ ಇರುವ ಹಿನ್ನೆಲೆಯಲ್ಲಿ ಈ ಕಡತಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಸರಕಾರ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿತ್ತು.

ಪ್ರತಿ ತಿಂಗಳು ಬೋಸ್‌ ಅವರಿಗೆ ಸಂಬಂಧಿಸಿದ 25 ಕಡತಗಳನ್ನು ಲೋಕಾರ್ಪಣೆಗೊಳಿಸುವ ಉದ್ದೇಶವನ್ನು ಪತ್ರಾಗಾರ ಇಲಾಖೆ ಹೊಂದಿದೆ ಎಂದು ಹೇಳಿತ್ತು. ಈ ಹಿಂದೆ ಬಂಗಾಳ ಸರಕಾರ ಕೂಡ ಕಡತಗಳನ್ನು ಬಯಲು ಮಾಡಿತ್ತು.
-ಉದಯವಾಣಿ

ಇಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ರಹಸ್ಯ ಕಡತಗಳಲ್ಲಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಾಗಿದೆ. ಕೇಂದ್ರ ಬಿಡುಗಡೆ ಮಾಡಿರುವ ಕಡತದಲ್ಲಿ ಮಹತ್ವದ ಮಾಹಿತಿಗಳು ಇರುವುದಾಗಿ ಮಾಧ್ಯಮದ ವರದಿಗಳು ತಿಳಿಸಿದೆ.

ಇಂದು ಎಲ್ಲಾ ಭಾರತೀಯರಿಗೆ ಮಹತ್ವದ ದಿನ: ಮೋದಿ ಟ್ವೀಟ್
ಇಂದು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜನ್ಮ ದಿನ. ಅಷ್ಟೇ ಅಲ್ಲ ಇವತ್ತು ಎಲ್ಲಾ ಭಾರತೀಯರಿಗೂ ಮಹತ್ವದ ದಿನ, ಯಾಕೆಂದರೆ ನೇತಾಜಿಗೆ ಸಂಬಂಧಿಸಿದ ನೂರು ರಹಸ್ಯ ಕಡತಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಟ್ವೀಟ್ ಮಾಡಿದ್ದಾರೆ.

Write A Comment