Uncategorized

ಸನ್ನಿ ಜೊತೆ ಅಭಿನಯಿಸಲು ಸಿದ್ಧ ಎಂದ ಆಮೀರ್ ಖಾನ್

Pinterest LinkedIn Tumblr

aamir-sunnyಮುಂಬೈ: ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ಜೊತೆ ಕೆಲಸ ಮಾಡಲು ಸಿದ್ಧ ಎಂದು ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಅವರು ಬುಧವಾರ ಹೇಳಿದ್ದಾರೆ.

ಇತ್ತೀಚೆಗಷ್ಟೇ ಟಿವಿ ಸಂದರ್ಶನವೊಂದರಲ್ಲಿ ಸನ್ನಿ ಸಂದರ್ಶಕರ ಪ್ರಶ್ನೆಗಳಿಗೆ ನೀಡಿದ ಉತ್ತರವನ್ನು ನೋಡಿ ಬಾಲಿವುಡ್ ನಟ-ನಟಿಯರ ದಂಡೇ ಮೆಚ್ಚಿಕೊಂಡಿತ್ತು. ಸಂದರ್ಶನದಲ್ಲಿ ಸನ್ನಿ ‘ಅಮೀರ್ ಖಾನ್ ನನ್ನ ಜೊತೆಗೆ ನಟಿಸಲು ಒಪ್ಪದೇ ಇದ್ದರೂ ನಾನು ಅವರ ಅಭಿಮಾನಿಯಾಗಿದ್ದೇನೆ. ಅವರ ಚಿತ್ರಗಳನ್ನು ತಪ್ಪದೆ ನೋಡುತ್ತೇನೆ’ ಎಂದು ಹೇಳಿದ್ದರು.

ಸಂದರ್ಶಕರು ಸನ್ನಿ ವೃತ್ತಿ ಬದುಕಿನ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಎಲ್ಲಾ ಪ್ರಶ್ನೆಗಳಿಗೂ ಆಕೆ ಸಮರ್ಪಕವಾಗಿಯೇ ಉತ್ತರಿಸಿದ್ದಳು. ಇದನ್ನು ಬಾಲಿವುಡ್​ನ ಅನುಷ್ಕಾ ಶರ್ಮಾ, ಅಲಿಯಾ ಭಟ್, ರಿಷಿ ಕಪೂರ್, ವಿದ್ಯಾಬಾಲನ್ ಸೇರಿದಂತೆ ಹಲವಾರು ನಟ ನಟಿಯರು ಮೆಚ್ಚಿಕೊಂಡಿದ್ದರು. ಆದರೆ ಆಮೀರ್ ಖಾನ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಸನ್ನಿ ಸಂದರ್ಶನ ವೀಕ್ಷಿಸಿದ ವೀಕ್ಷಿಸಿದ ಬಳಿಕ ಇಂದು ಸಾಮಾಜಿಕ ತಾಣದಲ್ಲಿ ಪ್ರತಿಕ್ರಿಯಿಸಿರುವ ಆಮೀರ್ ಖಾನ್, ‘ಸನ್ನಿ ಲಿಯೋನ್ ಸಂದರ್ಶನದಲ್ಲಿ ಅತ್ಯಂತ ಗೌರವಯುತವಾದ ಉತ್ತರಿಸಿದ್ದಾರೆ. ಆ ಸ್ಥಳದಲ್ಲಿ ಸಂದರ್ಶಕನಿಗೆ ನಾನೂ ಅಂತಹುದೇ ಉತ್ತರ ನೀಡುತ್ತಿದ್ದೆ’ ಎಂದು ಹೇಳಿದ್ದಾರೆ. ಅಲ್ಲದೆ ಸನ್ನಿ, ನಿನ್ನೊಂದಿಗೆ ನಟಿಸಲು ನನಗೆ ಖುಷಿ ಇದೆ. ನಿನ್ನ ‘ಹಿಂದಿನ’ವೃತ್ತಿಯ ಬಗ್ಗೆ ನನಗೆ ಏನೂ ಸಮಸ್ಯೆ ಇಲ್ಲ’ ಎಂದು ತಿಳಿಸಿದ್ದಾರೆ.

Write A Comment