ಮನೋರಂಜನೆ

ಅನೂಪ್‌ಗೆ ಬಾರಿ ಡಿಮಾಂಡ್: ನಾಲ್ಕೈದು ಚಿತ್ರಗಳ ಅವಕಾಶಗಳ ಸುರಿಮಳೆ

Pinterest LinkedIn Tumblr

laಚಂದನವನದಲ್ಲಿ ಹೊಸಬರ ಅಲೆ ಇತ್ತೀಚಿನ ದಿನಗಳಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ,ಅದರಲ್ಲಿಯೂ ರಾಜಕೀಯ ನಾಯಕರುಗಳ ಮಕ್ಕಳು ಬಾರಿ ಸದ್ದು ಮಾಡುತ್ತಿದ್ದಾರೆ. ರಾಜಕೀಯಕ್ಕಿಂತ ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳಲು ಮುಂದಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,ಮಾಜಿ ಸಚಿರಾದ ಹೆಚ್.ಎಂ ರೇವಣ್ಣ ಹಾಗು ಚಲುವರಾಯಸ್ವಾಮಿ ಅವರ ಮಕ್ಕಳು ಚಿತ್ರರಂಗಕ್ಕೆ ಅಧೀಕೃತವಾಗಿ ಪ್ರವೇಶ ಮಾಡಿದ್ದಾರೆ. ರಾಜಕೀಯ ನೇತಾರರ ಮಕ್ಕಳ ಚಿತ್ರಗಳು ಸದ್ದುಗದ್ದಲಿವಿಲ್ಲದೆ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಂತಕ್ಕೆ ಬಂದು ನಿಂತಿವೆ.
ಅದರಲ್ಲಿ ಮಾಜಿ ಸಚಿವ ಎಚ್.ಎಂ ರೇವಣ್ಣ ಅವರ ಪುತ್ರ ಅನೂಪ್ ಅವರ “ಲಕ್ಷ್ಮಣ”ಚಿತ್ರ ಚಿತ್ರೀಕರಣ ಮುಗಿಸಿದ್ದು ಮೂರು ಹಾಡುಗಳಷ್ಟೇ ಬಾಕಿ ಉಳಿಸಿಕೊಂಡಿದೆ. ಈಗಾಗಾಲೇ ಅನೂಪ್ ನಟನೆಯ ಲಕ್ಷ್ಮಣ ಚಿತ್ರದ ಟ್ರೈಲರ್‌ಗಳನ್ನು ಚಿತ್ರಮಂದಿರದಲ್ಲಿ ಬಿಟ್ಟಿದ್ದು ಅದನ್ನು ನೋಡಿದ ಚಿತ್ರರಂಗದ ಮಂದಿ ಅನೂಪ್ ನಟನೆಗೆ ಫಿದಾ ಆಗಿದ್ದಾರೆ.
ನಟಿಸಿದ ಮೊದಲ ಚಿತ್ರ “ಲಕ್ಷ್ಮಣ” ಬಿಡುಗಡೆಗೂ ಮುನ್ನ ಆಗಲೇ ನಾಲ್ಕೈದು ಚಿತ್ರಗಳಿಂದ ಆಫರ್ ಬಂದಿದ್ದು ಸಂಕ್ರಾಂತಿಯ ನಂತರ ಎರಡು ಮೂರು ಚಿತ್ರಗಳು ಸೆಟ್ಟೇರುವ ಸಾಧ್ಯತಗಳಿವೆ. ಅದರಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರ, ಕೆ.ಮಂಜು ನಿರ್ಮಾಣದ ಚಿತ್ರಗಳು ಸೇರಿಕೊಂಡಿವೆ.
ಸದಭಿರುಚಿಯ ಚಿತ್ರ ನಿರ್ದೇಶಕರೆಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಇದು. ಅನೂಪ್‌ಗೆ ಚಿತ್ರರಂಗದಲ್ಲಿ ಭದ್ರವಾದ ನೆಲೆಯ ಕಲ್ಪಸಲು ಪಣತೊಟ್ಟಿರುವ ಚಂದ್ರು ಅದಕ್ಕಾಗಿ ಸಾಕಷ್ಟು ಶ್ರಮ ಹಾಕಿ ಉತ್ತಮ ಚಿತ್ರವನ್ನು ತೆರೆಗೆ ತರಲು ಸಕಲ ಸಿದ್ದತೆಯನ್ನೂ ಮಾಡಿಕೊಂಡಿದ್ದಾರೆ.
ಚಿತ್ರೀಕರಣ ಆರಂಭಕ್ಕೂ ಮುನ್ನ ಚೀನಾದಲ್ಲಿ ಕುಂಗುಫೂ ಸೇರಿದಂತೆ ವಿವಿಧ ಕಲೆಗಳನ್ನು ಕಲಿತು ಬಂದಿದ್ದು ಅದನ್ನು ಚಿತ್ರದಲ್ಲಿ ನಿರ್ದೇಶಕ ಆರ್. ಚಂದ್ರು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ. ಅನೂಪ್ ನಟನೆ ಮತ್ತು ಆಕ್ಷನ್ ಸನ್ನಿವೇಶಗಳನ್ನು ಗಮನಿಸಿರುವ ಚಿತ್ರರಂಗದ ಮಂದಿ ಕನ್ನಡ ಚಿತ್ರರಂಗಕ್ಕೆ ಭರವಸೆಯ ಆಕ್ಷನ್ ಹೀರೋ ಆಗುವುದರಲ್ಲಿ ಎರಡು ಮಾತಿಲ್ಲ ಎನ್ನುವ ಮಾತುಗಳು ಹೀಗಾಗಲೇ ಕೇಳಿ ಬರುತ್ತಿವೆ ಅದಕ್ಕೆ ಕಾರಣ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ “ಲಕ್ಷ್ಮಣ”ನ ಟ್ರೈಲರ್ ಮೋಡಿ ಮಾಡಿರುವುದು.
ಜೊತೆಗೆ “ಲಕ್ಷ್ಮಣ”ಬಿಡುಗಡೆಗೂ ಮುನ್ನ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. ಅದಕ್ಕೆ ಕಾರಣ ಅನೂಪ್‌ನ ನಟನೆ ಒಂದೆಡೆಯಾದರೆ ಮತ್ತೊಂದೆಡೆ ನಿರ್ದೇಶಕ ಆರ್ ಚಂದ್ರು ಕೂಡ.

Write A Comment