ಬೆಂಗಳೂರು : ಕರ್ನಾಟಕ ರಾಜ್ಯ ವೆಂದರೆ ಎಲ್ಲವೂ ಒಂದೇ, ಇದನ್ನು ಹೈದ್ರಾಬಾದ್ ಕರ್ನಾಟಕ ಮುಂಬೈ ಕರ್ನಾಟಕ ಎಂದು ಏಕೆ ಬೇರ್ಪಡಿಸುತ್ತೀರಿ? ಎಂದು ಹೈಕೋರ್ಟ್ ಪ್ರಶ್ನಿಸಿದೆ.
ರಾಯಚೂರಲ್ಲಿ ಇಂಡಿಯನ್ ಇನ್ಸ್‍ಸ್ಟಿಟೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪಿಸಲು ಕೇಂದ್ರ, ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹಂಗಾಮಿ ಮುಖ್ಯ-ನ್ಯಾಯ ಮೂರ್ತಿ ಎಸ್.ಕೆ. ಮುಖ ರ್ಜಿ ಮತ್ತು ನ್ಯಾ.ರವಿ ಮಳೀಮಠ ಅವರಿದ್ದ ಪೀಠ, ಕರ್ನಾಟಕವೆಂದರೇ ಒಂದೇ ಅದನ್ನು ಎರಡು ಹೆಸರುಗಳಲ್ಲಿ ಕರೆಯುವುದು ಬೇಡ ಎಂದು ಹೇಳಿತು. ಅಲ್ಲದೆ, ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ಸರ್ಕಾರಗಳು ನಿರ್ಧರಿಸಿವೆ, ಈ ರೀತಿಯ ನಿರ್ಧಾರಗಳಲ್ಲಿ ಕೋರ್ಟ್ ಮಧ್ಯ ಪ್ರವೇಶ ಮಾಡಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊ ಳಿಸಿದೆ.
ಡಾ.ಡಿ.ಎಂ.ನಂಜುಂಡಪ್ಪ 2000 ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲ್ಬುರ್ಗಿಯ ಕೇಂದ್ರಿಯ ವಿದ್ಯಾಲಯ, ರಾಯಚೂರಿನಲ್ಲಿ ಐಐಟಿ ಮತ್ತು ಧಾರವಾಡದಲ್ಲಿ ಐಐಎಂ ಸ್ಥಾಪಿಸಲು ನಿರ್ಣಯ ಕೈಗೊಂಡಿದ್ದರು. ಜತೆಗೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಅದರಂತೆ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ವೇಳೆ ಸಚಿವ ಸಂಪುಟವು ರಾಯಚೂರಿನಲ್ಲಿ ಐಐಟಿ ಸ್ಥಾಪಿಸಲು ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.