ಮುಂಬೈ: ಖ್ಯಾತ ಚಿತ್ರನಟ ಕಬೀರ್ ಬೇಡಿ ಅವರು ತಮ್ಮ 70ನೇ ಜನ್ಮದಿನದಂದು ನಾಲ್ಕನೇ ವಿವಾಹವಾಗಿದ್ದಾರೆ. ದಶಕದಿಂದ ತಮ್ಮ ಜತೆಯಲ್ಲಿದ್ದ 40 ವರ್ಷದ ಪರ್ವೀನ್ ದುಸಂಜ್ ಅವರನ್ನು ವರಿಸಿದ್ದಾರೆ. ಶನಿವಾರ ಕಬೀರ್ ಬೇಡಿ ಅವರ ಹುಟ್ಟುಹಬ್ಬ ಸಮಾರಂಭವಿತ್ತು. ಈ ಸಂಭ್ರಮದ ಸಂದರ್ಭದಲ್ಲೇ ನಾವಿಬ್ಬರೂ ವಿವಾಹ ವಾಗುತ್ತಿದ್ದೇವೆ ಎಂದು ಕಬೀರ್- ದುಸಂಜ್ ಅವರು
ಘೋಷಿಸುವ ಮೂಲಕ ಅತಿಥಿಗಳನ್ನು ಚಕಿತಗೊಳಿಸಿದರು.
ರೂಪದರ್ಶಿ ಹಾಗೂ ಒಡಿಸ್ಸಿ ನೃತ್ಯಗಾರ್ತಿ ಪ್ರೊತಿಮಾ ಬೇಡಿ ಅವರನ್ನು ವಿವಾಹವಾಗಿದ್ದ ಕಬೀರ್ ಅವರು ಬಳಿಕ ಅವರಿಗೆ ವಿಚ್ಛೇದನ ನೀಡಿದ್ದರು. ನಂತರದ ದಿನಗಳಲ್ಲಿ ಸೂಸನ್ ಹಂಫ್ರೆಸ್, ನಿಕ್ಕಿ ಬೇಡಿ ಕೈ ಹಿಡಿದಿದ್ದ ಕಬೀರ್, ಅವರಿಂದಲೂ ವಿಚ್ಛೇದನ ಪಡೆದಿದ್ದರು.
-ಉದಯವಾಣಿ