ಪೇಶಾವರ: ಬಾಲಿವುಡ್ ನಟ ರಾಜ್ ಕಪೂರ್ ಅವರ ಐತಿಹಾಸಿಕ ಮನೆಯ ಒಂದು ಭಾಗವನ್ನು ಪಾಕಿ ಸ್ತಾನದಲ್ಲಿನ ಅದರ ಮಾಲೀಕರು ಕೆಡವಿ ಹಾಕಿದ್ದಾರೆ. ಆದರೆ, ಖೈಬರ್ ಫಖ್ತೂನ್ ಖ್ವ ಅಧಿಕಾರಿಗಳು ಸರಿ ಯಾದ ಸಮಯದಲ್ಲಿ ಕ್ರಮ ಕೈಗೊಂಡು ಕಟ್ಟಡ ಸಂಪೂರ್ಣ ನೆಲ ಸಮವಾಗುವುದನ್ನು ತಡೆದಿದ್ದಾರೆ.
ಪ್ಲಾಜಾವೊಂದನ್ನು ನಿರ್ಮಿಸುವ ಸಂಬಂಧ ಮನೆಯನ್ನು ಕೆಡವಲು ಮಾಲೀಕರು ಮುಂದಾಗಿದ್ದರು. ಧಾಕಿ ಮುನಾವರ್ ಶಾ ಪ್ರದೇಶ ದಲ್ಲಿರುವ ಐತಿಹಾಸಿಕ “ಹವೇಲಿ’ ಕಟ್ಟಡವನ್ನು ಕೆಡವುದಕ್ಕೆ ಪುರಾತತ್ವ ಇಲಾಖೆ ಶನಿವಾರ ಸ್ಥಳೀಯ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದೆ. ಕಪೂರ್ ಅವರ ತಂದೆ 1920ರಲ್ಲಿ ಈ ಮನೆಯನ್ನು ನಿರ್ಮಿಸಿದ್ದರು.
-ಉದಯವಾಣಿ