ಅಂತರಾಷ್ಟ್ರೀಯ

ಮಹಿಳೆಯರು, ಮಕ್ಕಳ ಕತ್ತರಿಸಿದ ಉಗ್ರರು : ಅಪಹೃತ 500 ಮಂದಿ ಜೀವಕ್ಕೂ ಸಂಚಕಾರ ? ತೀವ್ರ ಆತಂಕದಲ್ಲಿ ಸಿರಿಯಾ ಸರ್ಕಾರ

Pinterest LinkedIn Tumblr

isiಖೈರೂಲ್, ಜ.18-ಸರ್ಕಾರದ ಪರವಿರುವ ಯಾರನ್ನೂ ಉಳಿಯಗೊಡಬಾರದೆಂದು ನಿಶ್ಚಯಿಸಿದಂತಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು, ಹೆಚ್ಚಿನ ಸಂಖ್ಯೆಯ ಮಹಿಳೆಯರು, ಮಕ್ಕಳು ಸೇರಿದಂಥೆ ಸುಮಾರು 300ಕ್ಕೂ ಹೆಚ್ಚು ಜನರನ್ನು ಭೀಕರವಾಗಿ ಕತ್ತರಿಸಿ ಹಾಕಿದ್ದು, ಇದೇ ವೇಳೆ 450-500 ಮಂದಿ ನಾಗರಿಕರನ್ನು ಅಪಹರಿಸಿದ್ದಾರೆ. ಈ ಹಿಂದೆ ಮಾಡಿದಂತೆಯೇ ಇಸ್ಲಾಮಿಕ್ ಉಗ್ರರು ಅಪಹೃತರನ್ನೆಲ್ಲ ದಾರುಣವಾಗಿ ಹತ್ಯೆ ಮಾಡುವ ಮತ್ತು ಮಹಿಳೆಯರು, ಬಾಲಕಿಯರ ಮೇಲೆ ಪೈಶಾಚಿಕವಾಗಿ ಅತ್ಯಾಚಾರಗಳನ್ನು ನಡೆಸುವ ಸಾಧ್ಯತೆಗಳಿದ್ದು, ಅವರಾರೂ ಜೀವದಿಂದುಳಿಯುವ ನಿರೀಕ್ಷೆ ಇಲ್ಲ ಎಂದು ರಕ್ಷಣಾ ಇಲಾಖೆಯ ವಕ್ತಾರ ರಮಿ ಅಬ್ದುಲ್ ರೆಹ್ಮಾನ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ, ಭಾನುವಾರ 300ಕ್ಕೂ ಹೆಚ್ಚು ಜನರನ್ನು ಡೀರ್ ಅಲ್-ಝೋರ್ ಪಟ್ಟಣದಲ್ಲಿ ಹತ್ಯೆ ಮಾಡಿದ ನಂತರ ಉಗ್ರರು ನೂರಾರು ಮಂದಿಯನ್ನು ಅಪಹರಿಸಿಕೊಂಡು  ಹೋಗಿದ್ದರು. ಇದುವರೆಗೆ ಅಪಹೃತರ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗದಿರುವುದು  ಸರ್ಕಾರವನ್ನು ಆತಂಕಕ್ಕೀಡು ಮಾಡಿದೆ. ಈ ಮೊದಲು ಸಿರಿಯಾದ ವಿವಿಧ ಭಾಗಗಳಲ್ಲಿ  ನೂರಾರು ಜನರನ್ನು ಕೊಂದ ಇಸ್ಲಾಮಿಕ್ ಜಿಹಾದಿಗಳು ಮಹಿಳೆಯರು, ಬಾಲಕಿಯರನ್ನು ಅಪಹರಿಸಿ ಅವರ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದರು. ಕೆಲದಿನಗಳ ನಂತರ ಅವರಲ್ಲಿ ಕಲವರನ್ನು  ಬಿಡುಗಡೆ ಮಾಡಿ, ಇನ್ನೂ ಕೆಲವರನ್ನು ನಿರ್ದಯದಿಂದ ಹತ್ಯೆ ಮಾಡಿದ್ದರು.  ಈ ಬಾರಿಯೂ ಅದೇ ರೀತಿ ಹಿಂಸಾಚಾರ ಪುನರಾವರ್ತನೆಯಾಗಬಹುದೆಂಬ ಭೀತಿ ಈಗ ಸರ್ಕಾರವನ್ನು ಕಾಡುತ್ತಿದೆ.

Write A Comment