ಇತ್ತೀಚೆಗೆ ಟಿವಿ ಸೆಲೆಬ್ರಿಟಿಗಳೂ ಬೆಳ್ಳಿ ಪರದೆಯ ಮೇಲೆ ಮಿಂಚುವ ನಟಿಮಣಿಯರಿಗಿಂತ ಕಮ್ಮಿ ಇಲ್ಲ ಎಂದು ತೋರಿಸುತ್ತಿದ್ದಾರೆ. ಟಿವಿ ಸಿರಿಯಲ್ ಒಂದರಲ್ಲಿ ಸಕಲ ಗುಣ ಸಂಪನ್ನೆಯ ಪಾತ್ರ ನಿಭಾಯಿಸುವ ನಟಿ ಹಾಟ್ ಬಿಕಿನಿ ತೊಟ್ಟ ಪೋಟೋವನ್ನು ಹರಿಬಿಟ್ಟಿದ್ದಾಳೆ.
ಹೌದು, ಟಿವಿ ಸಿರಿಯಲ್ ಒಂದರ ಪ್ರಖ್ಯಾತ ನಟಿ ಹಾಗೂ ಏಕ್ತಾ ಕಪೂರ್ನ ಆಪ್ತೆ ಅನಿತಾ ಹಸಾನಂದಾನಿ ಈಗ ಬಿಕಿನಿ ಸೆಲ್ಫಿ ಒಂದನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾಳೆ. ಕೆಲ ಬಾಲಿವುಡ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿರುವ ಈಕೆ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಬರುವ ‘ಯೇ ಹೈ ಮೊಹಬ್ಬತೇ’ ಎಂಬ ಧಾರಾವಾಹಿಯಲ್ಲಿ ಅನಿತಾ ಶಗುನ್ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ಈಕೆ ಕಿರುತೆರೆಯ ಮೇಲೆ ಗೌರಮ್ಮ.. ತೆರೆಯ ಹಿಂದೆ ಬಿಚ್ಚಮ್ಮ?
ಹೊಸ ವರ್ಷಕ್ಕೆ ಬಿಕಿನಿ ಸೆಲ್ಫಿ ತೆಗೆದುಕೊಂಡು ತನ್ನ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾಳೆ ಈ ಚೆಲುವೆ.