ರಾಷ್ಟ್ರೀಯ

ಡಿಡಿಸಿಎ ಅಧ್ಯಕ್ಷನಾಗಿ ನಾನು ಅವ್ಯವಹಾರ ನಡೆಸಿಲ್ಲ, ಜೇಟ್ಲಿ

Pinterest LinkedIn Tumblr

1-jaitley-WEBನವದೆಹಲಿ: ದೆಹಲಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನಾನು ಯಾರಿಂದಲೂ ಹಣ ಪಡೆದಿಲ್ಲ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ದೆಹಲಿ ಕೋರ್ಟಿನಲ್ಲಿ ಹೇಳಿಕೆ ನೀಡಿದ್ದಾರೆ.

ಮಂಗಳವಾರ ಅರುಣ್ ಜೇಟ್ಲಿ ಅವರು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಂಜಯ್ ಖನಗ್​ವಾಲ್ ಅವರ ಪೀಠದ ಎದುರು ತಮ್ಮ ಹೇಳಿಕೆ ದಾಖಲಿಸಿದರು. ಡಿಡಿಸಿಎ ಹಗರಣ ಸಂಬಂಧ ಅರವಿಂದ್ ಕೇಜ್ರಿವಾಲ್ ಮತ್ತು ಇತರ ಆಪ್ ನಾಯಕರು ಜೇಟ್ಲಿ ವಿರುದ್ಧ ಆರೋಪ ಮಾಡಿದ್ದರು. ಈ ಸಂಬಂಧ ಜೇಟ್ಲಿ ಕೇಜ್ರಿವಾಲ್ ಮತ್ತು 5 ಆಪ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಲಾಯಿತು.

ಫಿರೋಜ್ ಕೋಟ್ಲಾ ಮೈದಾನ ನಿರ್ಮಾಣ ಸಂದರ್ಭದಲ್ಲಿ ನಾನು ಹಣ ಪಡೆದಿದ್ದೇನೆ ಎಂದು ಆರೋಪ ಹೊರಿಸಲಾಗಿದೆ. ಆದರೆ ಕಾಮಗಾರಿ ಉಸ್ತುವಾರಿಗಾಗಿ ನಿರ್ದೇಶಕ ಮಂಡಳಿಯ ಸಮಿತಿ ರಚಿಸಲಾಗಿತ್ತು. ನಾನು ಆ ಸಮಿತಿಯಲ್ಲಿ ಸಹ ಇರಲಿಲ್ಲ. ಆದರೂ ಕೇಜ್ರಿವಾಲ್ ನನ್ನ ಮತ್ತು ನನ್ನ ಕುಟುಂಬ ಸದಸ್ಯರ ವಿರುದ್ಧ ಆರೋಪ ಹೊರಿಸಿದ್ದಾರೆ ಎಂದು ಜೇಟ್ಲಿ ತಿಳಿಸಿದ್ದಾರೆ.

Write A Comment