ಮನೋರಂಜನೆ

ಮುಗ್ಧ ಹುಡುಗಿ ಸನ್ನಿ!

Pinterest LinkedIn Tumblr

SunnyLeone

ಹಾಲಿವುಡ್‌ ಹಾಟ್‌ ಬೆಡಗಿ ಸನ್ನಿ ಲಿಯಾನ್‌ ಹಿಂದಿ ಚಿತ್ರರಂಗದ ಹೊಸವರ್ಷದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವಯಸ್ಕರ ಚಿತ್ರಗಳಿಂದಲೇ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಗಳಿಸಿದ ಸನ್ನಿ ಪ್ರಕಾರ 2016 ಹಿಂದಿ ಚಿತ್ರರಂಗದ ಮಟ್ಟಿಗೆ ಅಡಲ್ಟ್‌ ಕಾಮೆಡಿ ಸಿನಿಮಾಗಳ ವರ್ಷವಾಗಲಿದೆ.

‘ಕ್ಯಾ ಕೂಲ್‌ ಹೈ ಹಮ್‌ 3’, ‘ಮಸ್ತಿಜಾದೆ’, ‘ಗ್ರೇಟ್‌ ಗ್ರ್ಯಾಂಡ್‌ ಮಸ್ತಿ’ ಹೀಗೆ 2016ರಲ್ಲಿ ಬಿಡುಗಡೆಯಾಗಲು ಕಾದಿರುವ ಅಡಲ್ಟ್‌ ಕಾಮೆಡಿ ಸಿನಿಮಾಗಳ ಪಟ್ಟಿಯನ್ನೂ ಅವರು ನೀಡಿದ್ದಾರೆ.

‘ಮಸ್ತಿಜಾದೆ’ ಸಿನಿಮಾದಲ್ಲಿನ ತಮ್ಮ ಸಹನಟ ವೀರ್‌ದಾಸ್‌ ಅವರೊಂದಿಗೆ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಗೆ ಹಾಜರಾದ ಸನ್ನಿ ಲಿಯಾನ್‌ ಹೀಗೆ ಹೇಳಿದ್ದಾರೆ.

‘ನನ್ನ ಪ್ರಕಾರ 2016 ಅಡಲ್ಟ್‌ ಕಾಮೆಡಿ ಸಿನಿಮಾಗಳ ವರ್ಷವಾಗಲಿದೆ. ಒಂದರ ಹಿಂದೆ ಒಂದರಂತೇ ಮೂರು ಸಿನಿಮಾಗಳು ಬಿಡುಗಡೆಯಾಗಲು ಕಾದಿವೆ. ಈ ಚಿತ್ರಗಳು ಹಾಸ್ಯದ ಹೊಸ ಟ್ರೆಂಡ್‌ ಸೃಷ್ಟಿಸಲಿವೆ’ ಎಂಬುದು ಅವರ ಮಾತು.

ಇದೇ ಸಮಯದಲ್ಲಿ ತಮ್ಮ ಹೊಸ ಸಿನಿಮಾ ‘ಮಸ್ತಿ ಜಾದೆ’ ಬಗ್ಗೆಯೂ ಅವರು ಮಾತನಾಡಿದ್ದಾರೆ. ‘ಇದು ಅಡಲ್ಟ್‌ ಕಾಮಿಡಿಯೇ ಆಗಿದ್ದರೂ ಉಳಿದ ಚಿತ್ರಗಳಿಗಿಂತಲೂ ಭಿನ್ನವಾಗಿದೆ’ ಎಂಬುದು ಅವರ ಅಭಿಮತ.

ಮಸ್ತಿಜಾದೆ ಸಿನಿಮಾದಲ್ಲಿ ಸನ್ನಿ, ಲೈಲಾ ಮತ್ತು ಲಿಲ್ಲಿ ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಪಾತ್ರಗಳಲ್ಲಿ ಲೈಲಾ ಪಾತ್ರವನ್ನು ನಿಭಾಯಿಸುವುದು ಅವರಿಗೆ ಕಷ್ಟಕರವಾಗಿತ್ತಂತೆ.

‘ಲೈಲಾ ಗ್ಲ್ಯಾಮರಸ್‌ ಹುಡುಗಿ. ಆ ಪಾತ್ರವನ್ನು ನಿಭಾಯಿಸುವುದು ನನಗೆ ಕಷ್ಟಕರವಾಗಿತ್ತು. ಯಾಕೆಂದರೆ ಎಲ್ಲರೂ ನನ್ನನ್ನು ಆ ಪಾತ್ರದಂತೆಯೇ ನೋಡುತ್ತಾರೆ. ಆದರೆ ಲಿಲ್ಲಿ ಮುಗ್ಧ ಹುಡುಗಿ. ಆ ಪಾತ್ರವನ್ನು ನಿಭಾಯಿಸುವುದು ನನಗೆ ಕಷ್ಟ ಎನಿಸಲೇ ಇಲ್ಲ. ಯಾಕೆಂದರೆ ಅದು ನನ್ನ ಸ್ವಭಾವಕ್ಕೆ ತುಂಬಾ ಹತ್ತಿರವಾದ ಪಾತ್ರ’ ಎಂದು ಅವರು ಪಾತ್ರವಿಶ್ಲೇಷಣೆ ಮಾಡಿದ್ದಾರೆ.

‘ಮಸ್ತಿಜಾದೆ’ ಸಿನಿಮಾದಲ್ಲಿ ತುಷಾರ್‌ ಕಪೂರ್‌ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬರುವ ಜನವರಿ 29ರಂದು ಬಿಡುಗಡೆಯಾಗಲಿದೆ.

Write A Comment