ಮನೋರಂಜನೆ

ಖ್ಯಾತ ಹಿಂದಿ ಚಿತ್ರನಟಿ ’ಲವ್ ಇನ್ ಶಿಮ್ಲಾ’ ಸಾಧನಾ ಇನ್ನಿಲ್ಲ

Pinterest LinkedIn Tumblr

sadhana-1-720x340ಮುಂಬೈ : 1960 ಮತ್ತು 70 ರ ದಶಕದ ಹಿಂದಿ ಚಿತ್ರರಂಗದ ಖ್ಯಾತ ನಟಿ ಸಾಧನಾ ಅವರು ಶುಕ್ರವಾರ ತಮ್ಮ 74 ನೇ ವಯಸ್ಸಿನಲ್ಲಿ ಅಸುನೀಗಿದರು.

1941ರ ಸೆಪ್ಟೆಂಬರ್ 2ರಂದು ವಿಭಜನೆ ಪೂರ್ವ ಭಾರತದ ಕರಾಚಿಯಲ್ಲಿ ಜನಿಸಿದ್ದ ಸಾಧನಾ ಶಿವದಾಸನಿ 1959 ರಲ್ಲಿ ‘ಲವ್ ಇನ್ ಶಿಮ್ಲಾ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದರು. ಬಳಿಕ ‘ಪ್ರೇಮ್ ಪತ್ರ’, ’ಹಮ್ ದೋನೋ’, ‘ಆರಜೂ’, ‘ಏಕ್ ಫೂಲ್ ದೋ ಮಾಲೀ’, ‘ವಕ್ತ್’ ಚಿತ್ರಗಳ ಮೂಲಕ ಖ್ಯಾತಿ ಪಡೆದಿದ್ದರು.

ಅವರ ಪ್ರಥಮ ಚಿತ್ರ ಸೂಪರ್ ಹಿಟ್ ಆಗಿತ್ತು. ಚಿತ್ರದ ನಂತರ ‘ಸಾಧನಾ ಕಟ್’ ಹೆಸರಿನಲ್ಲಿ ಖ್ಯಾತಿ ಪಡೆದು ಆಗಿನ ಟ್ರೆಂಡ್ ಆಗಿ ಮಾರ್ಪಾಡಾಗಿತ್ತು.

Write A Comment