ರಾಷ್ಟ್ರೀಯ

ತತ್-ಕ್ಷಣದ ಪ್ರತಿಕ್ರಿಯೆಗಳನ್ನು ಅಂತ್ಯಗೊಳಿಸಿ: ಮೋದಿ ಮತ್ತು ಶರೀಫ್ ಗೆ ಒಮರ್ ಕಿವಿಮಾತು

Pinterest LinkedIn Tumblr

Omar-abdullaಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿರುವುದು ‘ಒಳ್ಳೆಯ ನಡೆ’ ಎಂದಿರುವ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ, ಭಾರತ ಮತ್ತು ಪಾಕಿಸ್ತಾನ ಸಂಬಂಧಗಳ ನಡುವೆ ಸ್ಥಿರತೆ ಮೂಡಬೇಕಿದೆ ಎಂದಿದ್ದಾರೆ.

“ಪಾಕಿಸ್ತಾನದ ಜೊತೆ ಮತ್ತೆ ಮಾತುಕತೆಗಿಳಿದಿರುವುದು ಒಳ್ಳೆಯ ನಡೆ ಮತ್ತು ಸ್ವಾಗಾತಾರ್ಹ ಬೆಳವಣಿಗೆ” ಎಂದು ಕಾಬೂಲ್ ನಿಂದ ಹೊರಟಿದ್ದ ಮೋದಿ ಪೂರ್ವನಿಯೋಜಿತ ಯೋಜನೆಯಿಲ್ಲದ ಪಾಕಿಸ್ತಾನದ ಪ್ರಧಾನಿಯವರನ್ನು ಭೇಟಿ ಮಾಡಲು ಕರಾಚಿ ವಿಮಾನ ನಿಲ್ದಾಣಕ್ಕೆ ತೆರಳಿರುವ ನಡೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಒಮರ್ ಪ್ರತಿಕ್ರಿಯಿಸಿದ್ದಾರೆ.

“ಆದರೆ ಇಂತಹ ಬರೀ ಭಾವಾಭಿನಯಗಳಿಗಿಂತಲೂ ಸ್ಥಿರ ಬಾಂಧವ್ಯ ಮುಖ್ಯ” ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ.

“ತೀಕ್ಷ್ಣ ತತ್-ಕ್ಷಣದ ಪ್ರತಿಕ್ರಿಯೆಗಳಿಂದ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯಕ್ಕೆ ಧಕ್ಕೆ ಆಗಿದೆ ಮತ್ತು ಸ್ಥಿರತೆಯ ಅಭಾವ ಒದಗಿದೆ. ಇದನ್ನು ಈ ಬಾರಿ ಇಬ್ಬರೂ ಪ್ರಧಾನಿಗಳು ಸರಿಪಡಿಸಿಕೊಳ್ಳಲು ಮುನ್ನೋಡುತ್ತಿದ್ದೇನೆ” ಎಂದು ಕೂಡ ಅವರು ಟ್ವೀಟ್ ಮಾಡಿದ್ದಾರೆ.

Write A Comment