ಮನೋರಂಜನೆ

ನಟ ದರ್ಶನ್ ತಾಯಿ ಮೀನಾ ತೂಗುದೀಪ ವಿರುದ್ಧ ಎಫ್ಐಆರ್

Pinterest LinkedIn Tumblr

darshanಬೆಂಗಳೂರು: ಸ್ಯಾಂಡಲ್ ವುಡ್ ನಟ ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ವಿರುದ್ಧ ಕಳ್ಳತನ ಪ್ರಕರಣ ದಾಖಲಾಗಿದೆ.

ಮನೆಯ ಹೆಂಚು, ಮರದ ಸಾಮಗ್ರಿ ಕಳ್ಳತನ ಮಾಡಿದ್ದಾರೆ ಎಂದು ಮೀನಾ ಸಹೋದರಿಯರಾದ ಪಾರ್ವತಿ ರವಿಕುಮಾರ್, ದಮಯಂತಿ ಮಕರಂದನಾಯ್ಡು ವಿರುದ್ಧ ಚಾಮರಾಜನಾಯ್ಡು ಅವರು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ ಐಆರ್ ದಾಖಲಾಗಿದೆ.

ಮೀನಾ ಸಹೋದರ ಚಾಮರಾಜನಾಯ್ಡು ಮೊದಲಿಗೆ ಮೀನಾ ತೂಗುದೀಪ ವಿರುದ್ಧ ಪೊನ್ನಂಪೇಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಚಾಮರಾಜನಾಯ್ಡು ಅವರು ಪೊನ್ನಂಪೇಟೆಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ತೀರ್ಪು ಆಧರಿಸಿ ಮೀನಾ ಹಾಗೂ ಸಹೋದರಿಯರ ವಿರುದ್ಧ ಐಪಿಸಿ ಸೆಕ್ಷನ್ 421, 448, 380ರ ಅಡಿ ಕೇಸ್ ದಾಖಲಿಸಲಾಗಿದೆ.

ಪೊನ್ನಂಪೇಟೆಯ ಸರ್ವೆ ನಂಬರ್ 123\4ರಲ್ಲಿರುವ ಜಾಗ 0,10 ಸೆಂಟ್ ಜಾಗದಲ್ಲಿದ್ದ ಮನೆ ಧ್ವಂಸ ಮಾಡಿದ ಆರೋಪವನ್ನು ದರ್ಶನ್ ತಾಯಿ ಎದುರಿಸುತ್ತಿದ್ದಾರೆ.

Write A Comment