ಮನೋರಂಜನೆ

ಮಲ್ಟಿಸ್ಟಾರ್ ಸಿನಿಮಾ ಮಾಡೋ ನಿರ್ದೇಶಕರು ನಮ್ಮಲ್ಲಿಲ್ಲ; ದರ್ಶನ್

Pinterest LinkedIn Tumblr

actor-darshan-arrested-for-ಕನ್ನಡದಲ್ಲಿ ಮಲ್ಟಿಸ್ಟಾರರ್‌ ಟ್ರೆಂಡ್‌ ಶುರುವಾಗಿದೆ. ಇತ್ತೀಚೆಗಷ್ಟೇ ಶಿವಣ್ಣ-ಸುದೀಪ್‌ ಅಭಿನಯದ “ಕಲಿ’ ಸೆಟ್ಟೇರಿದೆ. ಶಿವರಾಜಕುಮಾರ್‌-ಪುನೀತ್‌ ಅಭಿನಯದ ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ. ಈ ಮಧ್ಯೆ ಶಿವರಾಜಕುಮಾರ್‌ ಹಾಗೂ ವಿಜಯ್‌ ಒಟ್ಟಿಗೆ ನಟಿಸಬಹುದು ಎಂಬ ಸುದ್ದಿಯೂ ಎಲ್ಲೆಡೆ ಹರಿದಾಡುತ್ತಿದೆ. ಈ ವಿಷಯ ಈಗ್ಯಾಕೆ ಎಂದರೆ, ಮಲ್ಟಿಸ್ಟಾರರ್‌ ಟ್ರೆಂಡ್‌ ನಡೆಯುತ್ತಿರುವ ಈ ಕಾಲದಲ್ಲಿ ದರ್ಶನ್‌ ಅವರಿಗೆ ಅಂಥದ್ದೇನಾದರೂ ಆಫ‌ರ್‌ಗಳು ಬಂದಿವೆಯಾ ಎಂಬ ಪ್ರಶ್ನೆ ಬಂದರೆ ಆಶ್ಚರ್ಯವಿಲ್ಲ.

ಈ ಕುರಿತು ದರ್ಶನ್‌ ಅವರನ್ನು ಕೇಳಿದರೆ, ಸದ್ಯಕ್ಕೆ ಮಲ್ಟಿಸ್ಟಾರರ್‌ ಚಿತ್ರದಲ್ಲಿ ನಟಿಸುವ ಯಾವುದೇ ಆಫ‌ರ್‌ ಅವರಿಗೆ ಬಂದಿಲ್ಲ ಎಂದು ಹೇಳುತ್ತಾರೆ. ಬಂದರೂ ತಾವು ಒಪ್ಪುವುದಿಲ್ಲ ಎನ್ನುತ್ತಾರೆ ಅವರು. “ಇವಾಗ ಇಬ್ಬರು ಹೀರೋಗಳನ್ನ ಮೇಂಟೇನ್‌ ಮಾಡುವ ಯಾವ ನಿರ್ದೇಶಕರಿದ್ದಾರೆ ಹೇಳಿ. ಅಂತಹ ನಿರ್ದೇಶಕರೊಬ್ಬರು ಬಂದರೆ ಓಕೆ. ಅದರಲ್ಲೂ ರೀಮೇಕ್‌ ಆದರೆ ಓಕೆ. ಸ್ವಮೇಕ್‌ ಆದರೆ ಒಪ್ಪುವುದಿಲ್ಲ. ಏಕೆಂದರೆ, ರೀಮೇಕ್‌ ಆದರೆ ಯಾರ ಪಾತ್ರ ಏನು, ಹೇಗಿದೆ ಎಂದೆಲ್ಲಾ ಗೊತ್ತಿರುತ್ತದೆ. ಆದರೆ, ಸ್ವಮೇಕ್‌ ಆದರೆ ಗೊತ್ತಿರುವುದಿಲ್ಲ. ಹಾಗಾಗಿ ರೀಮೇಕ್‌ ಆದರೆ ಒಪ್ಪುತ್ತೇನೆ’ ಎನ್ನುತ್ತಾರೆ ದರ್ಶನ್‌.

ಇನ್ನು ದರ್ಶನ್‌ ಅಭಿನಯದ “ವಿರಾಟ್‌’ ಚಿತ್ರದ ಮೊದಲ ಟ್ರೇಲರ್‌ ಸೋಮವಾರ ಬಿಡುಗಡೆಯಾಗಿದೆ. “ಕರ್ನಾಟಕಕ್ಕೆ ಪವರ್‌ ಕೊಡೋಕೆ ಹೊರಟೋನು ನಾನು …’ ಎಂದು ದರ್ಶನ್‌ ಡೈಲಾಗ್‌ ಹೊಡೆಯುವ ಟ್ರೇಲರ್‌ ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಟ್ರೇಲರ್‌ನಲ್ಲಿ ದರ್ಶನ್‌ ಹೇಳುವಂತೆ, ಈ ಕುರಿತು ವಿದ್ಯುತ್‌ ಸಮಸ್ಯೆಯ ಬಗ್ಗೆ ಹೇಳುತ್ತದಂತೆ. “ಚಿತ್ರ ಶುರುವಾಗಿದ್ದು ಮೂರು ವರ್ಷಗಳ ಹಿಂದೆ. ಆದರೆ, ಆ ಸಮಸ್ಯೆಗಳು ಈಗಲೂ ಇವೆ. ಚಿತ್ರದಲ್ಲಿ ಪವರ್‌ ಸಮಸ್ಯೆಯ ಬಗ್ಗೆ ಹೇಳಿದ್ದೇವೆ. ವಿದ್ಯುತ್‌ ಹೇಗೆ ಸಪ್ಲೆ„ ಮಾಡಬಹುದು ಎನ್ನುವುದರ ಕುರಿತೂ ಈ ಚಿತ್ರದಲ್ಲಿದೆ. ನಾವು ಪರಿಹಾರ ಕೊಡುವ ಪ್ರಯತ್ನವನ್ನೇನೋ ಮಾಡಿದ್ದೇವೆ. ಅದನ್ನು ತೆಗೆದುಕೊಳ್ಳೋದು, ಬಿಡೋದು ಸರ್ಕಾರಕ್ಕೆ ಬಿಟ್ಟಿದ್ದು’ ಎನ್ನುತ್ತಾರೆ ದರ್ಶನ್‌.

ಈ ಗಂಭೀರವಾದ ವಿಷಯದೊಂದಿಗೆ ಒಂದು ಲವ್‌ಸ್ಟೋರಿ ಸಹ ಅಡಗಿದೆಯಂತೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಅವರೆಲ್ಲಾ ನಾಯಕನನ್ನ ಹೇಗೆ ನೋಡುತ್ತಾರೆ ಎನ್ನುವುದು ಚಿತ್ರದ ಕಥೆಯಂತೆ. “ಆನೆ ಮತ್ತು ಕುರುಡರ ಕಥೆ ಕೇಳಿದ್ದೀರಲ್ಲ. ಕುರುಡರು ಆನೆಯನ್ನು ಮುಟ್ಟಿ ತಮಗೆ ಅನಿಸಿದ್ದನ್ನು ಹೇಗೆ ಹೇಳುತ್ತಾರೋ, ಅದೇ ರೀತಿ ಈ ಮೂವರು ನಾಯಕಿಯರು ಅವರವರ ದೃಷ್ಟಿಯಲ್ಲಿ ನಾಯಕನನ್ನು ಹೇಗೆ ನೋಡುತ್ತಾರೆ ಎಂಬುದು ಕಥೆ. ಇದು ಬರೀ ಲವ್‌ ಅಥವಾ ಆ್ಯಕ್ಷನ್‌ ಸಿನಿಮಾವಲ್ಲ. ಎರಡೂ ಈ ಚಿತ್ರದಲ್ಲಿದೆ’ ಎನ್ನುತ್ತಾರೆ ದರ್ಶನ್‌.

“ವಿರಾಟ್‌’ ಚಿತ್ರ ಚಿತ್ರೀಕರಣ ಬಹುತೇಕ ಮುಗಿದಿದೆಯಂತೆ. “ಚಿತ್ರ ನಿಲ್ಲುವಾಗ ಹಾಡು, ಒಂದು ಫೈಟು ಮತ್ತು ಎಂಟØತ್ತು ದೃಶ್ಯಗಳು ಬಾಕಿ ಇದ್ದವು. ಈಗ ಒಂದು ಹಾಡು ಮಾತ್ರ ಬಾಕಿ ಇದೆ. ಅದು ಮುಗಿದರೆ ಚಿತ್ರಕ್ಕೆ ಕುಂಬಳಕಾಯಿ. ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ’ ಎಂದು ಖಚಿತವಾಗಿ ಹೇಳುತ್ತಾರೆ. ಇತ್ತೀಚೆಗೆ ವರ್ಷಕ್ಕೊಂದು ಚಿತ್ರ ಮಾಡುತ್ತಿರುವ ದರ್ಶನ್‌ ಅವರಿಂದ ಮುಂದಿನ ವರ್ಷ ಅವರಿಂದ ಹೆಚ್ಚು ಚಿತ್ರ ನಿರೀಕ್ಷಿಸಬಹುದಾ ಎಂದರೆ, “ಮುಂದಿನ ವರ್ಷ ಮೂರು ಚಿತ್ರಗಳನ್ನು ನಿರೀಕ್ಷಿಸಬಹುದು’ ಎಂದು ಹೇಳುತ್ತಾರೆ.
-ಉದಯವಾಣಿ

Write A Comment