ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ಸಮೀಪ ಸೂಪರ್ ಕಿಂಗ್ ಹೆಸರಿನ ವಿಮಾನ ಪತನದಲ್ಲಿ ಮೃತಪಟ್ಟ 10 ಮಂದಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋಧರಿಗೆ ರಾಜನಾಥ್ ಸಿಂಗ್ ಬುಧವಾರ ಗೌರವ ನಮನ ಸಲ್ಲಿಸಿದರು.
ರಾಜನಾಥ್ ಸಿಂಗ್ ಅವರು ಸಫ್ದರ್ಜಂಗ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಿಎಸ್ಎಫ್ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಗೃಹ ಸಚಿವರ ಜೊತೆಗೆ ಆಗಮಿಸಿದ ಗೃಹ ರಾಜ್ಯ ಸಚಿವೆ ಕಿರಣ್ ರಿಜಿಜು, ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರೂ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಜಧಾನಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಆದ ಪ್ರಾಣಹಾನಿಗಾಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.