ಮನೋರಂಜನೆ

ಐಸಿಸಿ ರ್ಯಾಂಕಿಂಗ್: ಟಾಪ್-10ರಲ್ಲಿ ಜಡೇಜ, ಅಶ್ವಿನ್ ನಂ.1 ಆಲ್‌ರೌಂಡರ್

Pinterest LinkedIn Tumblr

India's Ravichandran Ashwin, left, celebrates with Ravindra Jadeja after he claims the wicket of England's Jonathan Trott during their one day international cricket match at the Oval cricket ground, London, Friday Sept. 9, 2011. (AP Photo/Tom Hevezi)

ದುಬೈ, ಡಿ.9: ದಕ್ಷಿಣ ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿರುವ ಆರ್. ಅಶ್ವಿನ್, ರವೀಂದ್ರ ಜಡೇಜ ಹಾಗೂ ಅಜಿಂಕ್ಯ ರಹಾನೆ ನೂತನ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಆಫ್ರಿಕ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಟ್ಟು 31 ವಿಕೆಟ್‌ಗಳನ್ನು ಉಡಾಯಿಸಿದ್ದ ಅಶ್ವಿನ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದರು. ಈ ಹಿನ್ನೆಲೆಯಲ್ಲಿ ಅವರೀಗ ವಿಶ್ವದ ಅಗ್ರಮಾನ್ಯ ಆಲ್‌ರೌಂಡರ್ ಆಗಿ ಮೂಡಿ ಬಂದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಾಕಿಬ್ ಅಲ್ ಹಸನ್‌ರನ್ನು ಹಿಂದಿಕ್ಕಿದ ಅಶ್ವಿನ್ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

ಭಾರತದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ನಾಲ್ಕು ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 7ನೆ ಸ್ಥಾನಕ್ಕೇರಿದರು. ಜಡೇಜ ಇದೇ ಮೊದಲ ಬಾರಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ಆಫ್ರಿಕ ವಿರುದ್ಧದ ಸರಣಿ ಆರಂಭಕ್ಕೆ ಮೊದಲು 30ನೆ ಸ್ಥಾನದಲ್ಲಿದ್ದ ಜಡೇಜ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಭಡ್ತಿ ಪಡೆದಿದ್ದಾರೆ. ದಿಲ್ಲಿ ಟೆಸ್ಟ್‌ನಲ್ಲಿ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿದ್ದ ಉಮೇಶ್ ಯಾದವ್ 13 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 32ನೆ ಸ್ಥಾನ ತಲುಪಿದರು.

ಹೊಸದಿಲ್ಲಿ ಟೆಸ್ಟ್‌ನಲ್ಲಿ ಅವಳಿ ಶತಕ ಸಿಡಿಸಿದ್ದ ಮಹಾರಾಷ್ಟ್ರದ ದಾಂಡಿಗ ರಹಾನೆ 14 ಸ್ಥಾನ ಭಡ್ತಿ ಪಡೆದು ಜೀವನಶ್ರೇಷ್ಠ 12ನೆ ಸ್ಥಾನ ತಲುಪಿದ್ದಾರೆ. ರಹಾನೆ ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತದ ದಾಂಡಿಗನಾಗಿದ್ದಾರೆ. ವಿರಾಟ್ ಕೊಹ್ಲಿ(14ನೆ), ಮುರಳಿ ವಿಜಯ್(16ನೆ) ಹಾಗೂ ಚೇತೇಶ್ವರ ಪೂಜಾರ(17ನೆ ಸ್ಥಾನ) ಅಗ್ರ 20ರಲ್ಲಿ ಸ್ಥಾನ ಪಡೆದಿದ್ದಾರೆ.

ನಾಲ್ಕನೆ ಟೆಸ್ಟ್‌ನಲ್ಲಿ 56 ರನ್ ಗಳಿಸಿದ್ದ ಅಶ್ವಿನ್ ದಾಂಡಿಗರ ರ್ಯಾಂಕಿಂಗ್‌ನಲ್ಲಿ 5 ಸ್ಥಾನ ಭಡ್ತಿ ಪಡೆದು 46ನೆ ಸ್ಥಾನ ತಲುಪಿದರು. ಬೌಲಿಂಗ್‌ನಲ್ಲಿ ಆಫ್ರಿಕ ದಾಂಡಿಗರಿಗೆ ಸಿಂಹಸ್ವಪ್ನರಾಗಿದ್ದ ಅಶ್ವಿನ್ 15 ಅಂಕವನ್ನು ಗಳಿಸಿದ್ದು, ನಂ.1 ಸ್ಥಾನದಲ್ಲಿರುವ ಡೇಲ್ ಸ್ಟೇಯ್ನಾಗಿಂತ ನಾಲ್ಕು ಅಂಕ ಹಿಂದಿದ್ದಾರೆ.

Write A Comment