ಮನೋರಂಜನೆ

ಡಿ.24 ರಿಂದ ಭಾರತ-ಪಾಕ್ ಸರಣಿ?

Pinterest LinkedIn Tumblr

Indo-Pak-cricket_AP_0

ಕರಾಚಿ, ಡಿ.9: ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಗೆ ಭಾರತ ಸರಕಾರದಿಂದ ಈ ವಾರ ಹಸಿರು ನಿಶಾನೆ ಲಭಿಸಿದರೆ ಕಿರು ಸರಣಿಯು ಡಿ.24 ರಿಂದ ಜನವರಿ 5ರ ತನಕ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತ-ಪಾಕ್ ತಂಡಗಳು ಶ್ರೀಲಂಕಾದಲ್ಲಿ 3 ಏಕದಿನ ಹಾಗೂ 2 ಟ್ವೆಂಟಿ-20 ಪಂದ್ಯಗಳನ್ನು ಆಡಲಿದ್ದು, ಉಭಯ ತಂಡಗಳು ಕೊಲಂಬೊದಿಂದ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಲಿವೆ ಎಂದು ಮೂಲಗಳು ತಿಳಿಸಿವೆ. ಭಾರತ ಜ.6 ಅಥವಾ 7 ರಂದು ಆಸ್ಟ್ರೇಲಿಯಕ್ಕೆ , ಪಾಕ್ ತಂಡ ಜ.7 ರಂದು ನ್ಯೂಝಿಲೆಂಡ್‌ಗೆ ಪ್ರವಾಸಕೈಗೊಳ್ಳಲಿದೆ.

Write A Comment