ಮನೋರಂಜನೆ

ಗಗನಸಖಿಯಾಗಿ ಸೋನಮ್

Pinterest LinkedIn Tumblr

sonam-kapoorನೀರ್ಜಾ ಭಾನೊತ್ 23 ವರ್ಷದ ಯುವತಿ. 1986ರಲ್ಲಿ ಕರಾಚಿಯಲ್ಲಿ ವಿಮಾನವೊಂದು ಹೈಜಾಕ್ ಆಗುತ್ತದೆ. ಅದರಲ್ಲಿದ್ದ 379 ಪ್ರಯಾಣಿಕರ ಪ್ರಾಣ ಅಪಾಯಕ್ಕೆ ಸಿಲುಕುತ್ತದೆ. ಆಗ ಶೌರ್ಯ ಮರೆಯುವುದು ಈ ಯುವತಿಯೇ. ಪ್ಯಾನ್‍ಎಎಂ ವಿಮಾನದಲ್ಲಿ ಗಗನಸಖಿಯಾಗಿದ್ದ ನೀರ್ಜಾ ತನ್ನ ಜೀವದ ಹಂಗು ತೊರೆದು ಪ್ರಯಾಣಿಕರನ್ನು ರಕ್ಷಿಸುತ್ತಾಳೆ.

ಮರಣೋತ್ತರ ಅಶೋಕ ಚಕ್ರ ಮತ್ತು ಪಾಕಿಸ್ತಾನದ ತಮಗ್ ಎ ಇನ್ಸಾನಿಯತ್ ಪ್ರಶಸ್ತಿಗಳು ಲಭಿಸಿದ್ದವು. ಈಕೆಯ ಬದುಕನ್ನು ಆಧರಿಸಿದ ಫಾಕ್ಸ್ ಸ್ಟಾರ್ ಸ್ಟುಡಿಯೋ ಸಿನಿರ್ಮಾ ನಿರ್ಮಿಸಲು ಮುಂದಾಗಿದ್ದು, ಇದರಲ್ಲಿ ನೀರ್ಜಾ ಪಾತ್ರದಲ್ಲಿ ಸೋನಮ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರವನ್ನು 2016ರ ಫೆಬ್ರವರಿ 16ರಂದು ತೆರೆಗೆ ತರುವುದಕ್ಕೆ ಸಿದ್ಧರಾಗಿರುವ ಫಾಕ್ಸ್ ಸ್ಟಾರ್ ಚಿತ್ರ ನಿರ್ಮಾಣ ಎಲ್ಲ ಕೆಲಸಗಳನ್ನು ಭರದಿಂದ ನಡೆಸಲು ಮುಂದಾಗಿದ್ದಾರೆ. ರಾಮ್ ಮಾಧ್ವನಿ ಚಿತ್ರ ನಿರ್ದೇಶಿಸಿದ್ದು, ತಾರೆಗಳ ಫೋಟೋ ತೆಗೆದು ಜನಪ್ರಿಯರಾದ ಅತುಲ್ ಕಸ್ಬೇಕರ್ ಚಿತ್ರಕ್ಕೆ ಹಣ ತೊಡಗಿಸಿದ್ದಾರೆ. ವಿಶೇಷವೆಂದರೆ ವಿಶಾಲ್-ಶೇಖರ್ ಸಂಗೀತ ನಿರ್ದೇಶಕರ ಜೋಡಿಯ ಶೇಖರ್ ರವಿಜಿಯಾನಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Write A Comment