ಅಂತರಾಷ್ಟ್ರೀಯ

ಆರೋಗ್ಯವಂತ ಹೃದಯಕ್ಕೆ ಎರಡು ಬಾರಿ ಸೆಕ್ಸ್ ಮಾಡಿದ್ರೆ ಸಾಕು!

Pinterest LinkedIn Tumblr

couple-newನವದೆಹಲಿ: ಲೈಂಗಿಕ ಜೀವನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ವಾರದಲ್ಲಿ  ಎರಡು ಬಾರಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಹೃದಯ ಆರೋಗ್ಯವಾಗಿರುತ್ತದೆ ಎಂದು ಅಮೆರಿಕನ್ ಜರ್ನಲ್ ಆಫ್ ಕಾರ್ಡಿಯಾಲಜಿ ಎಂಬ ಹೆಲ್ತ್ ಸೈಟ್ ತಿಳಿಸಿದೆ.

ಅಮೆರಿಕನ್ ಜರ್ನಲ್ ಆಫ್ ಕಾರ್ಡಿಯಾಲಜಿ ಪ್ರಕಾರ ಒಂದು ವಾರದಲ್ಲಿ ಕನಿಷ್ಠ ಪಕ್ಷ ಎರಡು ಬಾರಿ  ಲೈಂಗಿಕ ಕ್ರಿಯೆ ನಡೆಸುವುದರಿಂದ ಪುರುಷರು ಹೃದಯ ಸಂಬಂಧಿ ರೋಗಗಳಿಂದ ದೂರವಿರುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ಹೃಯದ ಸಂಬಂಧಿ ರೋಗಗಳಿಗೆ ಪ್ರಮುಖ ಕಾರಣ, ಅಧಿಕ ರಕ್ತದೊತ್ತಡ, ಲೈಂಗಿಕ ಕ್ರಿಯೆಯಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ರಕ್ತದ ಒತ್ತಡವನ್ನು ಕಡಿಮೆ ಮಾಡುವುದರಿಂದ ಹೃದಯ ಆರೋಗ್ಯವಾಗಿರುತ್ತದೆ.

ಇನ್ನು ಮಾನಸಿಕ ಒತ್ತಡವೂ ಕೂಡ ಹೃದಯರೋಗಕ್ಕೆ ಕಾರಣವಾಗುತ್ತದೆ. ಸಂಭೋಗ ಕ್ರಿಯೆಯಲ್ಲಿ  ಪುರುಷರಿಗೆ ಭೌತಿಕ ಸಂತೋಷ ಸಿಗುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯವಾಗುತ್ತದೆ.

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಲೈಂಗಿಕ ಕ್ರಿಯೆ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

Write A Comment