ಕರಾವಳಿ

ಮಲಾಡ್ ಕುರಾರ್ ವಿಲೇಜ್ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ವತಿಯಿಂದ “ಅಖಂಡ ಹರಿನಾಮ ಸಂಕೀರ್ತನೆ”; ದೇವರ ಕೀರ್ತನೆಯಿಂದ ಭಗವಂತನ ಅನುಗ್ರಹ – ಶ್ರೀನಿವಾಸ ಸಾಫಲ್ಯ

Pinterest LinkedIn Tumblr

mumbai_Dec 8-2015-002

ಮುಂಬಯಿ : ಮಲಾಡ್ ಪೂರ್ವ, ಕುರಾರ್ ವಿಲೇಜ್ ನ, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ವತಿಯಿಂದ ಡಿ. 6 ರಂದು ದೇವಸ್ಥಾನದ ವಠಾರದಲ್ಲಿ ದಿನಪೂರ್ತಿ ನಡೆದ “ಅಖಂಡ ಹರಿನಾಮ ಸಂಕೀರ್ತನೆ” ಯನ್ನು ಮುಂಜಾನೆ ಪ್ರಧಾನ ಅರ್ಚಕ ಹಾಗೂ ಪುರೋಹಿತರಾದ ರಾಘ್ಹವೇಂದ್ರ ತುಂಗಾ ಭಟ್, ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಪಿ ಸಾಫಲ್ಯ ಹಾಗೂ ಇತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು, ಸುಮಾರು ಹದಿಮೂರು ತಾಸು ನಡೆದ ಭಜನಾ ಕಾರ್ಯಕ್ರಮದಲ್ಲಿ ಶ್ರೀ ಶನೀಶ್ವರ ಭಜನಾ ಮಂಡಳಿ, ಕುರಾರ್ ವಿಲೇಜ್, ಮಲಾಡ್ ಸೇರಿ ನಗರದ ಹತ್ತು ಪ್ರಮುಖ ಭಜನಾ ಮಂಡಳಿಗಳು ಬಾಗವಹಿಸಿದ್ದು ಹಿರಿ, ಕಿರಿಯರು, ಪುರುಷರು ಹಾಗೂ ಮಹಿಳೆಯರು ಇದರಲ್ಲಿ ಭಕ್ತಿ ಪೂರ್ವಕವಾಗಿ ಪಾಲ್ಗೊಂಡಿದ್ದರು.

mumbai_Dec 8-2015-001

mumbai_Dec 8-2015-003

mumbai_Dec 8-2015-004

mumbai_Dec 8-2015-005

mumbai_Dec 8-2015-006

mumbai_Dec 8-2015-007

mumbai_Dec 8-2015-008

mumbai_Dec 8-2015-009

mumbai_Dec 8-2015-010

mumbai_Dec 8-2015-011

mumbai_Dec 8-2015-012

ಸಮಾರೋಪದ ನಂತರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಪಿ ಸಾಫಲ್ಯ ಅವರು ಹರಿನಾಮ ಸಂಕೀರ್ತನೆ ಬಗ್ಗೆ ವಿವರಿಸುತ್ತಾ ಈ ಸಮಿತಿಯು ಕಳೆದ 42 ವರ್ಷಗಳಿಂದ ಮಹಾನಗರದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿದ್ದು ಯುವ ಪೀಳಿಗೆಯಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಯನ್ನು ಉಳಿಸಿ ಬೆಳೆಸಲು ನಿರಂತರವಾಗಿ ಭಜನೆ, ಹರಿಕಥೆ, ಪ್ರವಚನ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂದು ಕೂಡಾ ಮುಂಜಾನೆಯಿಂದ ನಾವೆಲ್ಲರೂ ದೇವರ ಕೀರ್ತನೆ ಯೊಂದಿಗೆ ಭಗವಂತನ ನ್ನು ಸ್ಮರಿಸುತ್ತಿದ್ದು, ದೇವರ ಕೀರ್ತನೆಯಿಂದ ಎಲ್ಲರಿಗೂ ಶನಿ ದೇವರು, ಗಣಪತಿ ದೇವರು ಅನುಗ್ರಹಿಸಲಿ ಎಂದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಿಲ್ಲವರ ಅಶೋಷಿಯೇಶನ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್ ಪೂಜಾರಿ, ಗಂಗಾವಲಿ ಸಹಕಾರಿ ಬ್ಯಾಂಕಿನ ನಿರ್ದೇಶಕ ಉದಯ ಮೊಗವೀರ ಮತ್ತು ಹೋಟೇಲು ಉದ್ಯಮಿ ಸುರೇಶ್ ಶೆಟ್ಟಿಯವರು ಆಗಮಿಸಿದ್ದು ಅವರನ್ನು ಗೌರವ ಪ್ರಧಾನ ಕಾರ್ಯದರ್ಶಿ ಎಂ. ಡಿ. ಬಿಲ್ಲವ, ಉಪಾಧ್ಯಕ್ಷ ನಾರಾಯಣ ಎಸ್. ಶೆಟ್ಟಿ ಮತ್ತು ಕೋಶಾಧಿಕಾರಿ ಹರೀಶ್ ಜೆ ಸಾಲ್ಯಾನ್ ಶಾಲುಹೊದಿಸಿ, ಪುಷ್ಪ ಗುಚ್ಚ ನೀಡಿ ಗೌರವಿಸಿದರು. ಅಖಂಡ ಹರಿನಾಮ ಸಂಕೀರ್ತನೆ ಕಾರ್ಯವನ್ನು ನಿತ್ಯಪ್ರಕಾಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡಿದಿದ್ದು ಅವರನ್ನು ಜೊತೆ ಕಾರ್ಯದರ್ಶಿ ಸಂತೋಷ್ ಎಸ್. ಪೂಜಾರಿ ಗೌರವಿಸಿದರು.

ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ದಿನ ಪೂರ್ತಿ ಜರಗಿದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕುರಾರ್ ವಿಲೇಜ್ ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ ಇತರ ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ ಪೇತ್ರಿ, ನಿತ್ಯಾನಂದ ಎಲ್ ಕೋಟ್ಯಾನ್, ದಿನೇಶ್ ಡಿ. ಕುಂಬ್ಳ, ಶಿವಾನಂದ ಎನ್ ದೇವಾಡಿಗ, ಸದಸ್ಯರುಗಳಾದ ರಮಕೃಷ್ಣ ವಿ ಶೆಟ್ಟಿಯಾನ್, ಹರೀಶ್ ಡಿ. ಕುಂದರ್, ಪ್ರಭಾಕರ ಬಿ ಶೆಟ್ಟಿ, ಸದಾನಂದ ಕೆ ನಾಯಕ್, ಸಂತೋಷ್ ರಾವ್, ಶ್ರೀಮತಿ ಶಾಲಿನಿ ಶೆಟ್ಟಿ, ಮಧುಸೂಧನ್ ಪಾಲನ್, ಸ್ನೇಹಲತಾ ನಾಯಕ್, ಯಶೋಧಾ ಕುಂಬ್ಳೆ, ಗಿರಿಜಾ ಮರಕಳ, ರಾಜಶ್ರೀ ಪೂಜಾರಿ, ಜಯಂತಿ ಸಾಲ್ಯಾನ್, ಅರ್ಚಕ ನಾರಾಯಣ ಭಟ್ ಸಲಹೆಗಾರರಾದ ಶ್ರೀಧರ ಆರ್ ಶೆಟ್ಟಿ ಮತ್ತು ಬಾಬು ಎನ್ ಚಂದನ್, ಮಹಿಳಾ ವಿಭಾಗದ ಪ್ರಮುಖರಾದ ಶೀತಲ್ ಎನ್ ಕೋಟ್ಯಾನ್, ಮಹಿಳಾ ವಿಭಾಗದ ಎಲ್ಲಾ ಸದಸ್ಯರು ಸಹಕರಿಸಿರುವರು.

ಚಿತ್ರ; ವರದಿ : ಈಶ್ವರ ಎಂ. ಐಲ್
ಚಿತ್ರ : ಆನಂದ್ ಪಿ. ಐಲ್

Write A Comment