ಮನೋರಂಜನೆ

ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಿಂದ ಹೊರ ನಡೆದ ಸುಶಾಂತ್ ಸಿಂಗ್ ರಜಪೂತ್

Pinterest LinkedIn Tumblr

su

ಬೆಂಗಳೂರು: ನಿರ್ದೇಶಕ ಮೋಹಿತ್ ಸೂರಿ ಈ ಹಿಂದೆ ತಮ್ಮ ಹಾಫ್ ಗರ್ಲ್ ಫ್ರೆಂಡ್ ಸಿನಿಮಾದಲ್ಲಿ ನಾಯಕನಾಗಿ ನಟ ಸುಶಾಂತ್ ಸಿಂಗ್ ರಜಪೂತ್ ಕಾಣಿಸಿಕೊಳ್ಳುತ್ತಿದ್ದಾರೆ ಅಂತಾ ಘೋಷಿಸಿದ್ರು.ಆದ್ರೆ  ಸಿನಿಮಾದಲ್ಲಿ ಸುಶಾಂತ್ ಸಿಂಗ್ ಅಭಿನಯಿಸುತ್ತಿಲ್ಲ ಅಂತಾ  ಮೋಹಿತ್ ಸೂರಿ ಅವರೇ ತಿಳಿಸಿದ್ದಾರೆ.ಡೇಟ್ ಸಮಸ್ಯೆಯಿಂದಾಗಿ  ಸಿನಿಮಾದಿಂದ ಸುಶಾಂತ್ ಹೊರ ನಡೆದಿದ್ದಾರೆ.

ಇನ್ನು ಸಿನಿಮಾದಿಂದ ಹೊರ ನಡೆದಿರೋದಕ್ಕೆ ಸುಶಾಂತ್ ಸಿಂಗ್ ರಜಪೂತ್ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.ನಾನು ಸಿನಿಮಾದಿಂದ ಹೊರ ನಡೆದಿರೋದು ಅನಿರೀಕ್ಷಿತ. ಆದ್ರೆ ನಾನು ಈ ಸಿನಿಮಾದಲ್ಲಿ ನಟಿಸುವ ವೇಳೆಯಲ್ಲಿ ಮತ್ತೊಂದು ಸಿನಿಮಾವನ್ನು ಕೂಡ ಒಪ್ಪಿಕೊಂಡಿದ್ದೇನೆ. ಹಾಗಾಗಿ ನನಗೆ ಮೋಹಿತ್ ಸೂರಿ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಿನಿಮಾದಿಂದ ಹೊರ ನಡೆದಿದ್ದೇನೆ ಅಂತಾ ಅವರು ಹೇಳಿದ್ದಾರೆ.ಇನ್ನು ಏಕ್ತಾ ಜೊತೆ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಕ್ಕೆ ನನಗೆ ಬೇಸರವಾಗಿದೆ ಅಂತಾ ಅವರು ಹೇಳಿದ್ದಾರೆ.

ಸಿನಿಮಾದಿಂದ ಸುಶಾಂತ್ ಹೊರ ನಡೆದಿರೋದರಿಂದ ಅವರ ಜಾಗಕ್ಕೆ ಇನ್ನು ಯಾರು ಬರುತ್ತಾರೆ ಅನ್ನೋದು ಇದುವರೆಗೂ ಕನ್ಫರ್ಮ್ ಆಗಿಲ್ಲ.ಇನ್ನು ನಾಯಕಿಯ ಸ್ಥಾನಕ್ಕೆ ಈಗಾಗಲೇ ಆಲಿಯಾ ಭಚ್ ಹಾಗೂ ಕೃತಿ ಸನೋನ್ ಹೆಸರು ಕೇಳಿ ಬರುತ್ತಿದೆ.ಆದ್ರೆ ಇವರಿಬ್ಬರಲ್ಲಿ ಅಂತಿಮವಾಗಿ ಯಾರು ಆಯ್ಕೆಯಾಗುತ್ತಾರೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

Write A Comment