ಮನೋರಂಜನೆ

“ಗೀತಾ ಬ್ಯಾಂಗಲ್‌ ಸ್ಟೋರ್‌’ ನಟಿ ದಾಂಪತ್ಯದಲ್ಲಿ ಬಿರುಕು

Pinterest LinkedIn Tumblr

sushmithaಬೆಂಗಳೂರು: ತನ್ನ ಪತಿ ತನಗೆ ಚಿತ್ರ ಹಿಂಸೆ ನೀಡುತ್ತಿದ್ದಾನೆಂದು “ಗೀತಾ ಬ್ಯಾಂಗಲ್‌ ಸ್ಟೋರ್‌’ ಚಿತ್ರದ ನಾಯಕಿ ಸುಶ್ಮಿತಾ ದೂರಿದ್ದಾರೆ. ತಾನು ಪ್ರೀತಿಸಿ ವಿವಾಹವಾದ ಪತಿಯಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಯಾಗುತ್ತಿದ್ದು, ಅಡುಗೆ ಮಾಡು ಎಂದು ಕಾಲಿನಿಂದ ಒದೆಯುವ ಜೊತೆಗೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದಾನೆಂದು ಆರೋಪಿಸಿದ್ದಾರೆ. ಬಾಡಿಗೆ ಮನೆಯಲ್ಲಿದ್ದಾಗ ಗಂಡನ ಚಿತ್ರಹಿಂಸೆ ತಾಳದೇ ಪೋಷಕರ ಜೊತೆ ಹೋಗುವುದಾಗಿ ಹೇಳಿದಾಗ ನನ್ನನ್ನು ಬೆದರಿಸಿದ್ದ.

ತುಂಬಾ ಪ್ರೀತಿಸಿ ವಿವಾಹವಾದ ಪತಿಯಿಂದ ಕಿರುಕುಳ ತಡೆಯಲಾಗುತ್ತಿಲ್ಲ ಎಂದು ದೂರು ಕೂಡ ನೀಡಿದ್ದೆ ಎಂದು ಸುದ್ದಿವಾಹಿನಿ ಮುಂದೆ ಅಲವತ್ತುಕೊಂಡಿದ್ದಾರೆ. ಸುಶ್ಮಿತಾ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿಯಾಗಿದ್ದು, ಕೆಲ ತಿಂಗಳ ಹಿಂದೆ ಬಿಡುಗಡೆಯಾದ “ಗೀತಾ ಬ್ಯಾಂಗಲ್‌ ಸ್ಟೋರ್‌’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳದ ಸುಶ್ಮಿತಾ ಈಗ ದಾಂಪತ್ಯ ಕಲಹದೊಂದಿಗೆ ಸುದ್ದಿಯಾಗಿದ್ದಾರೆ.
-ಉದಯವಾಣಿ

Write A Comment