ಅಂತರಾಷ್ಟ್ರೀಯ

ದಿನಕ್ಕೆ ಮೂರರಿಂದ ಐದು ಲೋಟ ಕಾಫಿ ಸೇವನೆಯಿಂದ ಸಾವಿನ ಅಪಾಯ ಕಡಿಮೆ

Pinterest LinkedIn Tumblr

Coffeeನ್ಯೂಯಾರ್ಕ್: ದಿನದಲ್ಲಿ ಕಾಫಿ ಕುಡಿಯದೆ ಇರುವವರು ಅಥವಾ ಕಡಿಮೆ ಕಾಫಿ ಕುಡಿಯುವವರಿಗಿಂತಲೂ ಮೂರರಿಂದ ಐದು ಲೋಟ ಕಾಫಿ ಕುಡಿಯುವವರಿಗೆ ವಿವಿಧ ರೋಗಗಳಿಂದ ಉಂಟಾಗಬಲ್ಲ ಅವಧಿಗೂ ಮುಂಚಿನ ಸಾವಿನ ಅಪಾಯ ಕಡಿಮೆ ಎನ್ನುತ್ತದೆ ನೂತನ ಅಧ್ಯಯನವೊಂದು.

ಹಾರ್ವರ್ಡ್ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯಕ್ಕಾಗಿ ಟಿ ಎಚ್ ಚ್ಯಾನ್ ಶಾಲೆಯ ಸಂಶೋಧಕರು ನಡೆಸಿರುವ ಈ ಅಧ್ಯಯನದ ಪ್ರಕಾರ ಹೃದ್ರೋಗ, ನರರೋಗ ಮತ್ತು ಟೈಪ್ ೨ ಡಯಾಬೆಟಿಸ್ ನಿಂದ ಉಂಟಾಗಬಲ್ಲ ಸಾವಿನ ಅಪಾಯವನ್ನು ಕಾಫಿ ತಗ್ಗಿಸುತ್ತದೆ ಎನ್ನುತ್ತದೆ.

೩೦ ವರ್ಷಗಳಿಂದ ನಾಲ್ಕು ವರ್ಷಕ್ಕೊಮ್ಮೆ ಆಹಾರದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಬದಲಿಸಿ ಈ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದ ಸಮಯದಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ೧೯೫೨೪ ಮಹಿಳೆಯರು ಮತ್ತು ೧೨೪೩೨ ಮಹಿಳೆಯರು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ.

ಈ ಅಧ್ಯಯನದಲ್ಲಿ ತಿಳಿಸಿರುವಂತೆ ಸಾಧಾರಣ ಮಟ್ಟದಲಿ ಕಾಫಿ ಸೇವಿಸುವವರಲ್ಲಿ ಹೃದ್ರೋಗ, ಟೈಪ್ ೨ ಡಯಾಬೆಟಿಸ್, ನರರೋಗ ಸಂಬಂಧಿ ಪಾರ್ಕಿನ್ಸನ್ ಖಾಯಿಲೆ ಮತ್ತು ಆತ್ಮಹತ್ಯೆ ಗಳಿಂದ ಉಂಟಾಗುವ ಅಪಾಯ ಕಡಿಮೆ ಆಗಿದೆ ಎಂದು ತಿಳಿದುಬಂದಿದೆ.

ಕ್ಯಾನ್ಸರ್ ನಿಂದ ಒದಗುವ ಸಾವಿಗೂ ಕಾಫಿಗೂ ಸಂಬಂಧವಿಲ್ಲ ಎಂದು ಕೂಡ ಅಧ್ಯಯನ ತಿಳಿಸಿದೆ.

Write A Comment